ನವದೆಹಲಿ: 2014ರಲ್ಲಿ ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನ ಸರ್ಕಾರವನ್ನು ರಚನೆ ಮಾಡುವ ಕನಸು ಕಂಡಿರಲಿಲ್ಲ. ಬದಲಾಗಿ ಆ ದಿನ ದೇಶವನ್ನು ಮುನ್ನಡೆಸುವ ಸಂಕಲ್ಪ ಮಾಡಿದ್ದೆ ಎಂದು ತಮ್ಮ ಮನದಾಳದ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.
72ನೆಯ ಸ್ವಾತಂತ್ರೋತ್ಸವದ ಅಂಗವಾಗಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಅಂದು ನಾನು ದೇಶವನ್ನು ಕಟ್ಟುವ ಕನಸನ್ನು ಕಂಡಿದ್ದೆ. ಅದನ್ನು ನನಸು ಮಾಡಲು ಸತತವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಭಾಷಣ ಆರಂಭದಲ್ಲಿ ದೇಶವಾಸಿಗಳಿಗೆ 72ನೆಯ ಸ್ವಾತಂತ್ರೋತ್ಸವದ ಶುಭಾಶಯ ಕೋರಿದ ಪ್ರಧಾನಿ ರಾಜಾಸ್ತಾನಿ ಶೈಲಿಯ ಕೇಸರಿ ರುಮಾಲು ತೊಟ್ಟು ಸಾಕ್ಷಾತ್ ವಿವೇಕಾನಂದರಂತೆ ಕಂಗೊಳಿಸುತ್ತಿದ್ದರು.
ಪ್ರಧಾನಿ ಭಾಷಣದ ಪ್ರಮುಖಾಂಶಗಳು:
- ಕ್ರಾಂತಿಕಾರರು, ಯುವಜನತೆಯ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮ ವೀರರ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳಬೇಕಿದೆ
- ಏಳು ಸಮುದ್ರಗಳನ್ನು ದಾಟಿ ಭಾರತೀಯರು ದೇಶದ ಕೀರ್ತಿಯನ್ನು ಪಸರಿಸಿದ್ದು, ವಿಶ್ವದ ಭೂಪಟದಲ್ಲಿ ದೇಶದ ಛಾಪು ಮೂಡಿದೆ
- ನಮ್ಮ ಸಂವಿಧಾನದಲ್ಲಿ ಬಡವರಿಗೆ ನ್ಯಾಯ ಸಿಕ್ಕಿದೆ
- 2013ಕ್ಕೂ ಮೊದಲಿದ್ದ ಪರಿಸ್ಥಿತಿ ಈಗಿಲ್ಲ. 2013ಕ್ಕೂ ಮೊದಲಿನಂತೆ ಕೆಲಸ ಮಾಡಿದರೆ ದೇಶ ಮುಂದುವರೆಯಲು 100 ವರ್ಷ ಬೇಕು. ಶೌಚಾಲಯದ ವಿಷಯದಲ್ಲಿ ಆದ ಬದಲಾವಣೆಗಳನ್ನು ಗಮನಿಸಬೇಕು
- ನಮ್ಮ ಸರ್ಕಾರಎಲ್‌ಪಿಜಿ ಮೂಲಕ ಬಡ ಮಹಿಳೆಯರನ್ನು ಹೊಗೆಮುಕ್ತಗೊಳಿಸಿದೆ
- ಬೇನಾಮಿ ವಿರುದ್ಧ ಕಾನೂನು ಮೂಲಕ ಹೋರಾಟ ಮಾಡಿದ್ದೇವೆ
- 2014ರ ಮೊದಲು ದೇಶದ ಪ್ರಸಿದ್ದ ವ್ಯಕ್ತಿಗಳು ಏನು ಹೇಳಿದ್ದರು. ದೇಶದ ಆರ್ಥಿಕತೆ ಸಂಕಷ್ಟದಲ್ಲಿದೆ ಎಂದಿದ್ದರು. ಇದೀಗ ವಿಶ್ವದ ಆರ್ಥಿಕ ತಜ್ಞರು ದೇಶದ ಆರ್ಥಿಕತೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ
- ಜನರ ಹಿತಕ್ಕಾಗಿ ಸಂಕಲ್ಪದೊಂದಿಗೆ ನಾವು ಹೋರಾಡಿದ್ದೇವೆ
- ದೇಶ ಆಧುನಿಕತೆಯತ್ತ ಮುನ್ನುಗ್ಗುತ್ತಿದೆ
- ದೇಶದ ಮೊಬೈಲ್ ತಯಾರಕ ಕಂಪನಿಗಳು ಹೆಚ್ಚಾಗುತ್ತಿವೆ
- ವಿಮಾನ ಖರೀದಿಯಲ್ಲೂ ಹೆಚ್ಚಳವಾಗಿದೆ
- ಭಾರತ ಮಲ್ಟಿ ಬಿಲಿಯನ್ ಹೂಡಿಕೆಯ ಸ್ಥಳವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ
- ದೇಶದ ಯುವಜನತೆ ಬಿಪಿಒ ಗಳನ್ನು ಆರಂಭಿಸಿದ್ದಾರೆ
- ಯುವ ಜನತೆ ಪ್ರಗತಿಯ ಗತಿಯನ್ನು ಬದಲಿಸಿದ್ದಾರೆ
- ದೇಶದ ವಿಜ್ಞಾನಿಗಳು ಏಕಕಾಲಕ್ಕೆ 100 ಉಪಗ್ರಹಗಳನ್ನು ಉಡಾಯಿಸಿದ್ದಾರೆ.
- ನಮ್ಮ ವಿಜ್ಞಾನಿಗಳ ಸತತ ಶ್ರಮದಿಂದ ಮಂಗಳಯಾನ, ಜಗತ್ತಿನೆಲ್ಲೆಡೆ ದೇಶದ ಹೆಸರು ರಾರಾಜಿಸುತ್ತಿದೆ.
- ಮನುಷ್ಯರ ಗೌರವ ಕುಸಿದರೆ, ದೇಶದ ಗೌರವವೂ ಕುಸಿಯುತ್ತದೆ. ಹೀಗಾಗಿ ಪ್ರಜೆಗಳು ಗೌರವದಿಂದ ಜೀವಿಸುವಂತೆ ಮಾಡಿದ್ದೇವೆ.
- ಸೌಭಾಗ್ಯ ಯೋಜನೆ ಮೂಲಕ ಬಡವರ ಮನೆಗಳಿಗೆ ವಿದ್ಯುತ್ ನೀಡಿದ್ದೇವೆ
- ಖಾದಿ ಮಾರಾಟ ಮೊದಲಿಗಿಂತ ದುಪ್ಪಟ್ಟಾಗಿದೆ
- ಕೈಮಗ್ಗ ಮಾಡುವವರೂ ಉತ್ತಮ ಜೀವನ ನಡೆಸುತ್ತಿದ್ದಾರೆ
- ಗ್ರಾಮ ಸ್ವರಾಜ್ ಯೋಜನೆ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಿದ್ದೇವೆ
- ದೇಶದ ಜನತೆಯ ಅಭಿವೃದ್ಧಿಗಾಗಿ ನಾನು ನೆಮ್ಮದಿಯಿಂದ ಇರುವುದಿಲ್ಲ
- ಎಲ್ಲರಿಗೂ ಮನೆ, ಎಲ್ಲಾ ಮನೆಗಲ್ಲಿಗೂ ವಿದ್ಯುತ್
- ವಿದ್ಯುತ್, ಗ್ಯಾಸ್ ಸಂಪರ್ಕ ಮೂಲಕ ಬಡವರ ಸೇವೆ
- ಮಹಿಳೆಯರಿಗೆ ಗೌರವ ನೀಡುವುದು ನಮ್ಮ ಸಂಸ್ಕಾರ
- ಎಲ್ಲೆಡೆ ಶೌಚಾಲಯ, ಕೌಶಲ್ಯ ಹಾಗೂ ಪ್ರಗತಿಗೆ ಒತ್ತು
- ದೇಶದ ಮಕ್ಕಳನ್ನು ಅಪೌಷ್ಠಿಕತೆಯಿಂದ ಮುಕ್ತ ಮಾಡಬೇಕಿದೆ
- ನಾವು ದೇಶವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ
- ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಕ ಮುಂದೆ ಸಾಗ್ತೇವೆ
- ಅಭಿವೃದ್ಧಿ ಮೂಲಕ ಕಾಶ್ಮೀರದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ
- ಮುಸ್ಲಿಂ ಮಹಿಳೆಯರ ರಕ್ಷಣೆಗೆ ನಾವು ಬದ್ಧ
- ತ್ರಿವಳಿ ತಲಾಖ್ ಮಸೂದೆ ಜಾರಿಗೆ ನಾವು ಬದ್ಧರಾಗಿದ್ದೇವೆ
- ಕೆಲವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ
- ಅತ್ಯಾಚಾರಗಳಂತಹ ರಾಕ್ಷಸೀ ಕೃತ್ಯಗಳಿಗೆ ಅಂತ್ಯವಾಡಲು ಪಣ
- ರಾಕ್ಷಸಿ ಮನೋವೃತ್ತಿಯವರಿಗೆ ಅಂತ್ಯ ಹಾಡಬೇಕಿದೆ
- ಅತ್ಯಾಚಾರ ಮುಕ್ತ ದೇಶವನ್ನಾಗಿಸಲು ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದೆ
- ಲಂಚ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ
- 3 ಲಕ್ಷ ನಕಲಿ ಕಂಪನಿಗಳಿಗೆ ಬೀಗ ಹಾಕಿದ್ದೇವೆ
- ದೇಶದ ಸುಪ್ರೀಂ ಕೋರ್ಟ್ ನಲ್ಲಿ ಇಂದು ಮೂವರು ಮಹಿಳಾ ನ್ಯಾಯಾಧೀಶರಿದ್ದಾರೆ
- ಮಹಿಳಾ ನ್ಯಾಯಾಧೀಶರು ದೇಶದ ಹೆಮ್ಮೆ
- ನಾವು ನಿಮ್ಮೊಂದಿಗೆ ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಿದೆ
- ಪ್ರಾಮಾಣಿಕ ತೆರಿಗೆದಾರರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ
- ಪ್ರಾಮಾಣಿಕ ತೆರಿಗೆ ಪಾವತಿಯಿಂದ 3 ಕೋಟಿ ಬಡವರಿಗೆ ಆಹಾರ ಸಿಗಲಿದೆ
- ನೀವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದರೆ ಬಡವರಿಗೆ ಅನುಕೂಲವಾಗಲಿದೆ
- ದೇಶ ಬಡವರ ಗೌರವಯುತ ಜೀವನಕ್ಕಾಗಿ ಕೆಲಸ ಮಾಡಬೇಕಿದೆ
- ಬಡವರಿಗೆ ನೀಡುವ ಅಕ್ಕಿ, ಗೊಧಿಯಲ್ಲೂ ಮೋಸ ಮಾಡಲಾಗುತ್ತಿತ್ತು ನಾವು ಈ ಎಲ್ಲಾ ಅಕ್ರಮಗಳನ್ನೂ ನಿಯಂತ್ರಿಸಿದ್ದೇವೆ
- ನಾವು ಭ್ರಷ್ತಾಚಾರ, ಕಪ್ಪುಹಣಕ್ಕೆ ಬ್ರೇಕ್ ಹಾಕಿದ್ದೇವೆ
Discussion about this post