ನವದೆಹಲಿ: ನನ್ನ ಒಬ್ಬ ಮಗನನ್ನು ತಾಯಿ ಭಾರತಿಯ ಸೇವೆಗಾಗಿ ಅರ್ಪಿಸಿ, ತಾಯ್ನಾಡಿಗಾಗಿ ಆತನನ್ನು ಕಳೆದುಕೊಂಡೆ. ಈಗ ಇನ್ನೊಬ್ಬ ಮಗನನ್ನೂ ಸಹ ಯುದ್ಧಕ್ಕೆ ಕಳುಹಿಸುತ್ತೇನೆ. ಆದರೆ ಪಾಕಿಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಡಬೇಡಿ: ಇದು ನಿನ್ನೆ ನಡೆದ ಪುಲ್ವಾಮಾ ಉಗ್ರರ ದಾಳಿಯಲ್ಲಿ ವೀರಸ್ವರ್ಗ ಸೇರಿದ ಸಿಆರ್’ಪಿಎಫ್ ಯೋಧ ರತನ್ ಠಾಕೂರ್ ಅವರ ತಂದೆಯ ಮಾತುಗಳು…
ಹೌದು… ಪುಲ್ವಾಮಾದಲ್ಲಿ ನಿನ್ನೆ ಪಾಕ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಸಿಆರ್’ಪಿಎಫ್‌ನ 42 ಉಗ್ರರು ವೀರಸ್ವರ್ಗ ಸೇರಿದ್ದಾರೆ. ಇಂತಹ ವೀರರಲ್ಲಿ ಬಿಹಾರದ ಬಗಲ್’ಪುರದ ರತನ್ ಠಾಕೂರ್ ಸಹ ಒಬ್ಬರು.
ತಮ್ಮ ಮಗ ವೀರಸ್ವರ್ಗ ಸೇರಿದ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ನನ್ನ ಒಬ್ಬ ಮಗನನ್ನು ತಾಯಿ ಭಾರತಾಂಬೆ ಮಡಿಲಿಗೆ ಅರ್ಪಿಸಿದೆ. ಅವನ ಪ್ರಾಣ ತಾಯ್ನಾಡಿಗೆ ಅರ್ಪಿತವಾಗಿದೆ. ಈಗ ನನ್ನ ಇನ್ನೊಬ್ಬ ಮಗನನ್ನೂ ಸಹ ಯುದ್ಧಕ್ಕೆ ಕಳುಹಿಸುತ್ತೇನೆ. ಅಲ್ಲದೇ, ಅವನ ಪ್ರಾಣವನ್ನೂ ಸಹ ತಾಯ್ನಾಡಿಗಾಗಿ ಅರ್ಪಿಸಲು ನಾನು ಸಿದ್ದವಾಗಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ಪಾಕಿಸ್ಥಾನವನ್ನು ಬಿಡಬೇಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಿಜಕ್ಕೂ ಇಂತಹ ತಂದೆ ಹಾಗೂ ಕುಟುಂಬವನ್ನು ಪಡೆದ ತಾಯಿ ಭಾರತಿ ಧನ್ಯಳು…
Discussion about this post