No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Saturday, May 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಸುಧೈವ ಕುಟುಂಬಕಂನ ನಿಜ ಮೌಲ್ಯವನ್ನು ನಾನು ಆಗ ಅರಿತಿದ್ದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 25, 2021
in Special Articles
0
ವಸುಧೈವ ಕುಟುಂಬಕಂನ ನಿಜ ಮೌಲ್ಯವನ್ನು ನಾನು ಆಗ ಅರಿತಿದ್ದೆ

Image Courtesy: Internet

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಜನಪ್ರಿಯ ಟಿವಿ ಧಾರಾವಾಹಿ ’ದಿ ಟ್ವೈಲೈಟ್ ಝೋನ್’ನ ಒಂದು ಕಂತು ’ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (1963). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ. ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು ಸರ್ವವೂ ಶಾಶ್ವತವಾಗಿ, ನಿಶ್ಚಲವಾಗಿ ನಿಂತು ಬಿಡುತ್ತವೆ. ಇದರಿಂದ ದಿಗ್ಬ್ರಾಂತನಾದ ಆ ಮನುಷ್ಯ, ದಿಗಿಲಿನಲ್ಲೇ ಸುತ್ತಲೂ ಎಲ್ಲೆಲ್ಲೋ ಓಡಾಡುತ್ತಾನೆ. ಆದರೆ ಏನೂ ಪ್ರಯೋಜನವಾಗುವುದಿಲ್ಲ. ಆಗ ಕೊನೆಯ ನಿರೂಪಣೆ ಕೇಳುತ್ತೇವೆ, ಆ ಮನುಷ್ಯನಿಗೆ ಸಮಯದ ಕಾಣಿಕೆ ನೀಡಲಾಗಿತ್ತು. ಅವನು ಅದನ್ನು ಬಳಸಿದ ಮತ್ತು ದುರ್ಬಳಕೆ ಮಾಡಿಕೊಂಡ.

ಸುತ್ತಲೂ ಜತೆಗಿರಲು ಅಥವಾ ಮಾತಾಡಲು ಅಥವಾ ಪ್ರೀತಿ ಮಾಡಲು ಯಾರೂ ಇಲ್ಲದೆ ಹೋದಾಗ, ಅಷ್ಟೊಂದು ಹಣವನ್ನು ಅವನೇನು ಮಾಡಿಯಾನು? ತಕ್ಷಣವೇ ಆ ಹಣದ ಮೌಲ್ಯ, ಶ್ರೀಮಂತನಾಗುವುದು, ಅತಿ ಶ್ರೀಮಂತನಾಗುವುದು, ಬೇರೆಯವರಿಗಿಂತ ಉನ್ನತ ವ್ಯಕ್ತಿಯಾಗಿರುವುದರ ಪ್ರಾಮುಖ್ಯತೆ ಸಂಪೂರ್ಣ ‘ಅರ್ಥರಹಿತ’ವಾಗಿ ಬಿಡುತ್ತದೆ. ಹಾಗಿದ್ದರೆ, ಯಾವುದು ಹೆಚ್ಚು ಮುಖ್ಯವಾದುದು? ಹಣವೋ ಅಥವಾ ಜನರೋ? ಉತ್ತರ ’ಜನರು’ ಎಂದಾದರೆ ನಾವೇಕೆ ಯಾವಾಗಲೂ ಇತರರ ಮೇಲೆ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿರುತ್ತೇವೆ? ಸದಾ ನಾವು ಬೇರೆಯವರಿಗಿಂತಲೂ ಶ್ರೇಷ್ಠರೆಂದು ನಿರೂಪಿಸಲು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು. ಕದನಗಳು, ಯುದ್ಧಗಳಲ್ಲಿ ಹೋರಾಡಬಹುದು ಅಥವಾ ನಮ್ಮನ್ನು ನಾವೇ ವಿಭಜಿಸಿಕೊಳ್ಳಬಹುದು. ನಾಳೆ, ಒಬ್ಬ ವ್ಯಕ್ತಿ, ಭೂಮಿಯನ್ನು ಆಳುವವನು, ಡೈನೋಸಾರ್’ಗಳ ಹಾಗೆ ಅಳಿದು ಹೋಗಿ, ಭೂಮಿಯ ಇತಿಹಾಸದ ಭಾಗವಾಗಿ ಹೋದನೆಂದರೆ, ಆಗ ಅದರ ಕಾರಣ ಆ ಮನುಷ್ಯನೇ ಆಗಿರುತ್ತಾನೆ ಎಂದು ಖಚಿತವಾಗಿ ಹೇಳಬಲ್ಲೆ.

ಈ ಭಯಾನಕ ಆಲೋಚನೆ ಹಿಂದೂ ಪುರಾಣಗಳಲ್ಲಿ ಬರುವ ರಾಕ್ಷಸ ‘ಭಸ್ಮಾಸುರ’ನ ಕಥೆಯನ್ನು ನೆನಪಿಸುತ್ತದೆ. ನಮಗೆಲ್ಲ ತಿಳಿದಿರುವಂತೆ ಆ ರಾಕ್ಷಸನಿಗೆ, ಯಾರ ತಲೆಯನ್ನು ಅವನ ಕೈಯಿಂದ ಮುಟ್ಟುವನೋ ಅವರು ಒಡನೆಯೇ ಭಸ್ಮವಾಗಿ ಹೋಗುವರೆಂಬ ವರ ಕೊಡಲಾಗಿತ್ತು. ಮಹಾವಿಷ್ಣುವಿನ ಸ್ತ್ರೀ ಅವತಾರವಾದ ಮೋಹಿನಿಯು ಉಪಾಯದಿಂದ ಭಸ್ಮಾಸುರನು ತನ್ನ ತಲೆಯನ್ನು ತಾನೇ ಮುಟ್ಟಿಕೊಳ್ಳುವಂತೆ ಮಾಡುತ್ತಾಳೆ. ಸದಾ ಇತರರಿಗಿಂತಲೂ ನಾವೇ ಶ್ರೇಷ್ಠರೆಂಬ ಭಾವವನ್ನು ವಿನಾಶದ ಮೂಲಕ ಸಾಧಿಸಲು ಪ್ರಯತ್ನ ಪಡುತ್ತಿದ್ದರೆ ಮನುಷ್ಯನ ಹಣೆಬರಹವೂ ಈ ರಾಕ್ಷಸನದಂತೆಯೇ ಆಗಬಹುದು. ಕುಂಚದಲ್ಲಿ ಬಿಡಿಸಿದ ಚಿತ್ರಗಳು, ಛಾಯಾಚಿತ್ರಗಳು ಅಥವಾ ಯುದ್ಧ, ಬಾಂಬುಗಳನ್ನು ಹಾಕುವ, ಚಿತ್ರಹಿಂಸೆ, ನೋವು, ದುಃಖ, ಸಮಾಧಿಗಳು ಅಥವಾ ಯಾರದಾದರೂ ಸಾವನ್ನು ತೋರಿಸುವ ಚಲನಚಿತ್ರಗಳನ್ನು ನೋಡುವಾಗ ಅತ್ಯಂತ ಸಂಕಟ ಅನುಭವಿಸುತ್ತೇನೆ. ನೋವು, ಅಂತ್ಯ ಅಥವಾ ವಿನಾಶವನ್ನು ನೋಡಿದ ಮೇಲೆ ನನ್ನಲ್ಲಿ ಮೂಡುವ ವಾತ್ಸಲ್ಯ, ಸಹಾನುಭೂತಿ ಭಾವನೆಗಳು ಪರಿಚಿತ ಅಥವಾ ಅಪರಿಚಿತ ವ್ಯಕ್ತಿಯಲ್ಲಿ ಅವನು ಬದುಕಿರುವಾಗ ಏಕೆ ಹುಟ್ಟುವುದಿಲ್ಲ?ವೈಜ್ಞಾನಿಕ, ಕಾಲ್ಪನಿಕ, ರೋಮಾಂಚಕ ಚಲನಚಿತ್ರ ’ಗ್ರಾವಿಟಿ’ (2013)ಯಲ್ಲಿ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಅಲ್ಲಿ ಯಾರೆಂದರೆ ಯಾರೂ ಇಲ್ಲ, ಯಾವುದೇ ಸದ್ದೂ ಇಲ್ಲ. ಅಲ್ಲಿ ಮೇಲೆ, ಅಂತರಿಕ್ಷದಲ್ಲಿ, ಅವರುಗಳು ಮಾತ್ರ ಇದ್ದಾರೆ. ಆ ಸಿನಿಮಾ ನೋಡುವಾಗ, ನಾನೂ ಅಂತರಿಕ್ಷದಲ್ಲಿ ಇರುವ ಹಾಗೆ ಭಾಸವಾಗಿ, ಆ ಗಗನಯಾತ್ರಿಗಳಂತೆಯೇ ನಾನೂ ಭಯಾನಕ ಒಂಟಿತನವನ್ನು ಅನುಭವಿಸಿದೆ. ಆದರೆ, ಆ ಸಿನಿಮಾದಲ್ಲಿ, ನಮ್ಮ ಭೂಗ್ರಹಕ್ಕೆ ಆ ಗಗನಯಾತ್ರಿಗಳು ಮರಳುವಾಗ, ಅವರ ಜೊತೆಯಲ್ಲೇ ನಾವೆಲ್ಲರೂ ವಿಧವಿಧವಾದ ಶಬ್ದಗಳನ್ನು ಕೇಳುತ್ತೇವೆ. ಅದು ಅಷ್ಟು ಹಿತವಾಗಿತ್ತು. ಅದನ್ನು ಕೇಳುತ್ತಿರುವ ಹಾಗೆಯೇ ಇದ್ದಕ್ಕಿದ್ದಂತೆ ನನಗೆ ಆರಾಮವೆನಿಸತೊಡಗಿತು. ಕೊನೆಯಲ್ಲಿ ’ಹೋಂ ಸ್ವೀಟ್ ಹೋಂ’ ಜನರ ಮಧ್ಯದಲ್ಲಿ ಇರುವುದನ್ನು ಬಹಳ ಇಷ್ಟಪಟ್ಟೆ..ಜನರ ಮಹತ್ವ ಏನೆಂದು ನನಗೆ ತಿಳಿದಿತ್ತು. ಸಿನಿಮಾ ಮುಗಿದು ಇತರ ಪ್ರೇಕ್ಷಕರನ್ನು ನೋಡಿದಾಗ ಅವರೆಲ್ಲರೊಡನೆ ಒಂದು ಬಲವಾದ ನಂಟು ಭಾಸವಾಯಿತು. ಪ್ರತಿಯೊಬ್ಬರ ಮೇಲೂ ಅಕ್ಕರೆ ಉಂಟಾಗತೊಡಗಿತು. ಅವರ ಬಣ್ಣ ಅಥವಾ ಜನಾಂಗವನ್ನು ಗಮನಿಸುವುದು ಅಥವಾ ಲಕ್ಷಿಸುವುದು ನನಗೆ ಬೇಕಿರಲಿಲ್ಲ. ಅವರ ಧರ್ಮ ಯಾವುದು, ಜಾತಿ ಯಾವುದು ಅಥವಾ ಯಾವ ಭಾಗ ಅಥವಾ ರಾಜ್ಯದಿಂದ ಅವರು ಬೆಂಗಳೂರಿಗೆ ಬಂದಿರಬಹುದೆಂಬುದನ್ನು ತಿಳಿದುಕೊಳ್ಳುವುದರಲ್ಲೇ ಆಗಲಿ, ಊಹಿಸುವುದರಲ್ಲೇ ಆಗಲಿ, ನನಗೆ ಆಸಕ್ತಿಯೇ ಇರಲಿಲ್ಲ. ಏಕೆಂದರೆ, ಆಗ ತಾನೇ, ’ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥವನ್ನು, ನಾವೆಲ್ಲಾ ಒಂದೇ ಕುಟುಂಬದವರು ಎಂಬುದನ್ನು ಮತ್ತು ’ಮನುಕುಲ’ದ ನಿಜ ಮೌಲ್ಯವನ್ನು ಆಗ ಅರಿತುಕೊಂಡಿದ್ದೆ.


ಲೇಖಕರು: ಖ್ಯಾತ ನಟ, ಲೇಖಕ, ಗಾಯಕ ಮತ್ತು ನಿರ್ದೇಶಕ

(ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಿತಗೊಂಡ ಆಂಗ್ಲ ಲೇಖನದ ಕನ್ನಡ ಅನುವಾದ)
(ಕನ್ನಡ ಅನುವಾದ: ಜಯಶ್ರೀ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Actor AnirudhGravityKannada News WebsiteLatest News KannadaVasudaiva Kutumbakamಎ ಕೈಂಡ್ ಆಫ್ ಎ ಸ್ಟಾಪ್ ವಾಚ್ಗ್ರಾವಿಟಿವಸುಧೈವ ಕುಟುಂಬಕಂ
Share199Tweet123Send
Previous Post

ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ: ಹಾರನಹಳ್ಳಿಯಲ್ಲಿ ಯುವಾಬ್ರಿಗೇಡ್ ಬೃಹತ್ ಪ್ರತಿಭಟನೆ

Next Post

ಉದ್ಯೋಗವಿಲ್ಲದ ಎಂಪಿಎಂ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗವನ್ನು ಮಾದರಿ ಜಿಲ್ಲೆಯಾಗಿಸುವುದೇ ನಮ್ಮ ಗುರಿ: ಸಂಸದ ರಾಘವೇಂದ್ರ

ಉದ್ಯೋಗವಿಲ್ಲದ ಎಂಪಿಎಂ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ: ಸಂಸದ ರಾಘವೇಂದ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಸಂಸದ ರಾಘವೇಂದ್ರ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಸಂಸದ ರಾಘವೇಂದ್ರ

May 8, 2026
ಕೋಣಂದೂರು ಲಿಂಗಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕೋಣಂದೂರು ಲಿಂಗಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

May 8, 2026
ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ: ಸಚಿವ ಮಧು ಬಂಗಾರಪ್ಪ

ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ: ಸಚಿವ ಮಧು ಬಂಗಾರಪ್ಪ

May 8, 2026
SIR & ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಸತ್ಯ | ನಿಜಕ್ಕೂ ಐತಿಹಾಸಿಕ ತೀರ್ಪುಗೆ ಇವೇ ಕಾರಣ

SIR & ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಸತ್ಯ | ನಿಜಕ್ಕೂ ಐತಿಹಾಸಿಕ ತೀರ್ಪುಗೆ ಇವೇ ಕಾರಣ

May 8, 2026
ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

May 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL