ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅನೇಕರಿಗೆ ದೇವಾದಿ ದೇವತೆಗಳು ವಂದ್ಯರು. ಇನ್ನು ಕೆಲ ಮೂರ್ಖರಿಗೆ ನಿಂದ್ಯರು. ರಾಮಾಯಣ, ಮಹಾಭಾರತ ಧಾರವಾಹಿ ಹಿಂದೆ ಪ್ರಸಾರವಾಗಿದ್ದಾಗ ಭಕ್ತಿಯಿಂದ ನೋಡಿದವರು ಕೋಟಿ ಕೋಟಿ ಜನರು. ಆಗ ಇಷ್ಟೊಂದು ಕುಹಕಿಗಳು, ಅತೀ ಬುದ್ಧಿವಂತರು ಇರಲಿಲ್ಲ ಎಂದಲ್ಲ. ಅವರೂ ಇದ್ದರು. ಆದರೆ ನಿಂದನೆ ಮಾಡಲು ಈಗಿನಂತೆ ವೇದಿಕೆಗಳಿರಲಿಲ್ಲ. ಮಾಧ್ಯಮದವರು ಅಷ್ಟೊಂದು ಮುಂದುವರಿಯಲಿಲ್ಲ. ಕೇವಲ ದೂರದರ್ಶನ ಮಾತ್ರವೇ ಇತ್ತಷ್ಟೆ.
ಈಗ ಎರಡನೆಯ ಬಾರಿ ಬಂದಾಗ ಆಗಿನ ದೂರ್ತರ ಮಕ್ಕಳು ಬೆಳೆದಿದ್ದಾವೆ ಮತ್ತು ನೂರಾರು ಮಾಧ್ಯಮಗಳೂ ಇವೆ. ಟ್ವಿಟ್ಟರ್, ಫೇಸ್ ಬುಕ್ ಇತ್ಯಾದಿ ಅನೇಕ ಜಾಲತಾಣದಲ್ಲಿ ಸ್ವಂತ ಖಾತೆಗಳನ್ನು ತೆರೆದು ಬೊಗಳಲು ಅನುಕೂಲವೂ ಆಗಿದೆ. ಭಗವಾನನಂತವರು ಆಗಿನ ಪ್ರಸಾರದಲ್ಲಿ ಇದ್ದರು. ಆದರೆ ಅಷ್ಟೊಂದು ನಿಂದನೆ, ಹೊಲಸು ಮಾತುಗಳಲ್ಲಿ ಪ್ರಬುದ್ಧರಾಗಿರಲಿಲ್ಲ. ನಾವು ಕೂಡಾ ಆಗ ಭಕ್ತಿಯಿಂದ, ಭಾವನಾತ್ಮಕತೆಯಿಂದ ನೋಡುತ್ತಿದ್ದವರು ಈಗಂತೂ ಅದರೊಳಗಿನ ತತ್ವಗಳನ್ನು ಇನ್ನಷ್ಟು ಆಳವಾಗಿ ವಿಮರ್ಷೆ ಮಾಡಲು ಶಕ್ತರೂ ಆಗಿದ್ದೇವೆ. ಅಂದರೆ ಭಕ್ತಿಭಾವನೆಗಳಿಂದ ನೋಡಿದರೆ, ಅದರೊಳಗಿನ ಒಂದೊಂದು ಸಂದೇಶವೂ ನಮ್ಮೊಳಗಿನ ಸತ್ ಚೈತನ್ಯ ಬೆಳೆಯಲು ಕಾರಣವಾಗುತ್ತದೆ. ಅದನ್ನೇ ಕೀಳರಿಮೆಯಿಂದ ನೋಡಿದಾಗಲೂ ಅದರೊಳಗಿನ ಸತ್ಸಂದೇಶಗಳು ಅಪಾರ್ಥವಾಗಿ ಪರಿಣಾಮ ಬೀರಿ ನಿಂದಿಸುವ ಪ್ರಬುದ್ಧತೆಯನ್ನು ಹೆಚ್ಚಿಸುತ್ತದೆ. ಅಂತೂ ಒಂದು ಸತ್ಸಂದೇಶವನ್ನು ನೋಡುವ ರೀತಿಯಲ್ಲಿರುತ್ತದೆ.
ಈ ಎರಡೂ ಪುರಾಣ ಕಥೆಗಳ ಚಿತ್ರಗಳಲ್ಲೂ ದೇವಾದಿ ದೇವತೆಗಳೂ ಬರುತ್ತಾರೆ. ಆದರೆ ವಾಸ್ತವವಾಗಿ ಬರಿಗಣ್ಣಿಗೆ ಅವರು ಕಾಣುವುದಿಲ್ಲ. ಯಾರಿಗೆ ಅಂತರ್ ಚಕ್ಷು ಜಾಗೃತವಾಗಿರುತ್ತದೋ ಅಂತವರಿಗೆ ಆ ದೇವತೆಗಳು ಕಣ್ಣಿಗೆ ಕಾಣದಿದ್ದರೂ ಅನುಭವದಲ್ಲಿ ಕಾಣುತ್ತದೆ. ಮೂರ್ಖರಿಗೆ ಅಂತರ್ ಚಕ್ಷು ಕುರುಡಾಗಿರುವ ಕಾರಣ ಆ ದೇವತೆಗಳ ಅನುಭವ ಗೊತ್ತಾಗದೆ ಮತಾಂಧರಂತಹ ರಾಕ್ಷಸರು ಮಾತ್ರ ಕಾಣುತ್ತಾರೆ ಮತ್ತು ಅವರ ನಡೆಯಂತೆ ಇವರುಗಳ ನಡೆಯೂ ಇರುತ್ತದೆ. ಈಗ ಆಯಾಯ ದೇವತೆಗಳು ಎಲ್ಲೆಲ್ಲಿ ತಮ್ಮ ಸಾನ್ನಿಧ್ಯವನ್ನು ನೀಡುತ್ತಾರೆ ನೋಡೋಣ. ಇಲ್ಲಿ ಒಂದು ಆಡಳಿತ ಯಂತ್ರವನ್ನೇ ನೋಡೋಣ.
ರಾಷ್ಟ್ರಪತಿಯ ಅಭಿಮಾನಿ ದೇವರು ಪರಶಿವ. ಪ್ರಧಾನ ಮಂತ್ರಿಗೆ ಇಂದ್ರ. ರಕ್ಷಣಾ ಖಾತೆಗೆ ಸುಬ್ರಹ್ಮಣ್ಯ. ನ್ಯಾಯಾಲಯಕ್ಕೆ ಯಮಧರ್ಮರಾಜ. ಆಯುಧಗಳಿಗೆ ಅಗ್ನಿ. ಔಷಧಿಗಳಿಗೆ ಧನ್ವಂತರಿ. ಮೋಹ, ಮಾಯಾಪಾಶ ಇತ್ಯಾದಿಗಳಿಗೆ ಮಹಾಮಾಯೆ ಸಾಕ್ಷಾತ್ ಪರಶಿವನ ರಾಣಿ ಪಾರ್ವತಿ. ವಿದ್ಯಾ ಇಲಾಖೆಗೆ ಹಿರಣ್ಯಗರ್ಭ (ಬ್ರಹ್ಮ)ನ ರಾಣಿ ಸರಸ್ವತಿ. ಧನ ಸಂಪತ್ತು, ಪುತ್ರ ಸಂಪತ್ತು, ಧಾನ್ಯ ಸಂಪತ್ತು ಇತ್ಯಾದಿ ಸಂಪತ್ತಿಗೆ ಅಭಿಮಾನಿ ದೇವತೆಯೇ ಮಹಾಲಕ್ಷ್ಮೀ. ಭೂಮಿಯೊಳಗಿನ ಸಂಪತ್ತಿನ ರಕ್ಷಕನೇ ನಾಗದೇವರು. ಅದನ್ನು ನಾಶಮಾಡುವವರನ್ನು ನಾಶ ಮಾಡುವವನೇ ವರಾಹ ರೂಪಿ ಭಗವಂತ. ಹೀಗೇ ಇನ್ನೂ ಅನೇಕ ಖಾತೆ, ಉಪ ಖಾತೆಗಳಿವೆ. ಅದಕ್ಕೆಲ್ಲದಕ್ಕೂ ಅಭಿಮಾನಿ ದೇವತೆಗಳಿದ್ದಾರೆ.
ಹಾಗಾದರೆ ಪ್ರದ್ಯಮ್ನಾನಿರುದ್ದ ಸಂಕರ್ಷಣ ರೂಪಿ ಭಗವಾನ್ ವಿಷ್ಣುವಿಗೇನು ಕೆಲಸ ಎಂದು ಕೇಳಬಹುದು. ಅವನೇ ಮಹಾಚೈತನ್ಯ ಸ್ವರೂಪಿ ಸೂರ್ಯ ನಾರಾಯಣ. ನಾರಾ ಎಂದರೆ ನೀರು, ಆಕಾಶ. ಅದರಲ್ಲಿ ಆಯನ ಅಂದರೆ ಸಂಚರಿಸುವವನೇ ನಾರಾಯಣನು. ಇಡೀ ಜಗತ್ತಿನ ನಿಯಾಮಕ. ಇಷ್ಟೆಲ್ಲ ಅಭಿಮಾನಿ ದೇವತೆಗಳ ಕೆಲಸಗಳನ್ನು ಹಂಚಿ ನಿಯಂತ್ರಿಸುವವನು. ಕೆಲವೊಮ್ಮೆ ಈ ಖಾತೆಗಳಲ್ಲಿ ಅಧಿಕ ಪ್ರಸಂಗೀ ಕೆಲಸಗಳಾದರೆ, ತಪ್ಪು ಪ್ರಮಾದಗಳಾದರೆ ಆಗ ಅವನ ಅಧಿಕೃತ ಪ್ರವೇಶವಾಗುತ್ತದೆ. (ಉದಾಃ ಇಲ್ಲಿಯವರೆಗೆ ಸುಮಾರು ಎಪ್ಪತ್ತು ವರ್ಷಗಳಲ್ಲಿ ನಡೆದ ದುರಾಡಳಿತದ ಪ್ರಧಾನಿಗಳ ನಿಗ್ರಹಕ್ಕೆ ನರೇಂದ್ರ ದಾಮೋದರ ದಾಸನಾಗಿ ಬಂದ. ಮದ್ಯೆ ಮದ್ಯೆ ಅಟಲ್ ಜೀ, ಶಾಸ್ತ್ರಿ, ನೃಸಿಂಹ ರಾಯರಲ್ಲೂ ಇಂದ್ರ ಶಕ್ತಿ ಇತ್ತು. ಆಗ ರಾಕ್ಷಸರ ಕಾಟಗಳಿಂದ ಅದು ಅಷ್ಟೊಂದು ಕೆಲಸ ಮಾಡಲಿಲ್ಲ) ಹಿಂದೆ ರಾಮ ಪರಶುರಾಮರಾಗಿ, ಕೃಷ್ಣನಾಗಿ ಪ್ರವೇಶಿಸಿ ಧರ್ಮ ರಕ್ಷಣೆ ಮಾಡಿದ. ಈಗ ಅಭಿವೃದ್ಧಿ, ಅತಿಯಾದ ನಾಗರಿಕತೆ ಎಂಬ ಅಹಂಕಾರದಲ್ಲಿ ಮಾಡಬಾರದ್ದನ್ನು ಮಾಡುತ್ತಾ, ತಿನ್ನಬಾರದ್ದನ್ನು ತಿನ್ನುತ್ತಾ, totally we need enjoyment,we need our own religion, we do not see other religion in the world ಎಂಬ ಮತಾಂಧರಿಗೆ, ಕಾಮಾಂಧರಿಗೆ, ವೇದ ವಿರೋಧಿಗಳಿಗೆ, ಧರ್ಮ ವಿರೋಧಿಗಳಿಗೆ, ಸಂಪ್ರದಾಯ ವಿರೋಧಿಗಳಿಗೆ ಕೊರೋನ ರೂಪದಲ್ಲಿ ಒಂದು ಶಕ್ತಿಯನ್ನಿಳಿಸಿ ಪ್ರಜೆಗಳಿಗೆ ಪೂರ್ವದ ನೆನಪು ಬರುವಂತೆ ಮಾಡಿದ. ಪ್ರಕೃತಿಗೆ ಹೊಂದಿಕೊಂಡು ಹೇಗಿರಬೇಕು ಎಂಬುದನ್ನು ಪಾಠ ಕಲಿಸಿದ್ದು ಒಂದು ಹಂತ. ಇದಕ್ಕೂ ತಲೆ ಬಾಗದಿದ್ದರೆ ಹೇಗೂ ಯಮನ ಪಾಶ ಇದೆಯಲ್ಲ. ಅಂತೂ ಒಂದಲ್ಲ ಒಂದು ರೀತಿಯಲ್ಲಿ ತಿದ್ದುವುದು ಶಿಕ್ಷಿಸುವುದು ಮಾಡುತ್ತಾನೆ. ರಾಜಧರ್ಮ ವಿರೋಧಿಸುವವರನ್ನೇ ತಿದ್ದಬಹುದು, ತಿದ್ದಲಾಗದಿದ್ದರೆ ಯಮನ ಪಾಶಕ್ಕೆಸೆಯಬಹುದು.
ಪ್ರಕೃತಿಯೇ ಮೂವತ್ತಮೂರು ಕೋಟಿ ದೇವತೆಗಳ ಸಮೂಹ. ಇದರ ನಿಯಂತ್ರಣ ಮಾಡುವವನೇ ಸೂರ್ಯ ಸ್ವರೂಪದಲ್ಲಿರುವ, ಜಗದ ಚಕ್ಷುವಾದ ನಾರಾಯಣನು.
Get in Touch With Us info@kalpa.news Whatsapp: 9481252093
Discussion about this post