ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿ, ಸೀಲ್ ಡೌನ್ ಮಾಡಲಾಗಿರುವ ಪ್ರದೇಶದ ಮಂದಿ ಮನೆಯಿಂದ ಹೊರಕ್ಕೆ ಓಡಾಡಿದರೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ಮನೋಹರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಸೀಲ್ ಡೌನ್ ಮಾಡಲಾಗಿರುವ ಪ್ರದೇಶದ ವ್ಯಾಪ್ತಿಯಲ್ಲಿರುವ ಮಂದಿ ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಕ್ಕೆ ಬರುವಂತಿಲ್ಲ. ಅಲ್ಲಿನ ಜನರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ನಗರಸಭೆಯಿಂದಲೇ ನಿಗದಿತ ಸಮಯಕ್ಕೆ ಸರಬರಾಜು ಮಾಡಲಾಗುತ್ತದೆ. ಅಗತ್ಯವಿರುವವರು ಖರೀದಿ ಮಾಡಬಹುದು ಎಂದರು.
ಇದರ ಹೊರತಾಗಿ ಯಾವುದೇ ಕಾರಣಕ್ಕೂ ಅಲ್ಲಿನ ಜನರು ಮನೆಗಳಿಂದ ಹೊರಕ್ಕೆ ತಿರುಗಾಡುವಂತಿಲ್ಲ. ಸೀಲ್ ಡೌನ್ ಪ್ರದೇಶದ ಮಂದಿ ಕೆಲವರು ಹೊರಗಡೆ ತಿರುಗಾಡುತ್ತಿರುವ ಕುರಿತಾಗಿ ಸಾರ್ವಜನಿಕರಿಂದ ದೂರು ಮೌಖಿಕ ದೂರು ಬರುತ್ತಿವೆ. ಸೀಲ್ ಡೌನ್ ಅವಧಿ ಮುಕ್ತಾಯವಾಗುವವರೆಗೂ ಯಾರಾದರೂ ಹೊರಗಡೆ ತಿರುಗಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಎಫ್’ಐಆರ್ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Get In Touch With Us info@kalpa.news Whatsapp: 9481252093







Discussion about this post