ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿಕ್ಕಬಳ್ಳಾಪುರ: ದೊಡ್ಡ ಪೈಲಾಗೂರ್ಕಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆಯುಷ್ ಇಲಾಖೆಯ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಸಲಹೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾಕ್ಟರ್ ದಿವ್ಯ ಲಕ್ಷ್ಮಿ ಅವರು ಮಾತನಾಡಿ, ಪ್ರಸ್ತುತ ಸ್ವದೇಶಿ ವಸ್ತುಗಳನ್ನು, ಸ್ವದೇಶಿ ಆಹಾರ ಧಾನ್ಯಗಳ ಬಳಕೆ, ದೇಶೀಯ ಆರೋಗ್ಯ ವಿಧಾನ ಗಳಾದ ಆಯುಷ್ ಕ್ವಾತ(ಕಷಾಯ), ತಯಾರಿಸುವ ವಿಧಾನ, ಉಪಯೋಗಿಸುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು.
ಡಾ.ಅವಿನಾಶ್ ಅವರು ಮಾತನಾಡಿ, ಹಳ್ಳಿಗಳಲ್ಲಿ ಪುರಾತನ ಕಾಲದಿಂದಲೂ ಆಯುರ್ವೇದಿಕ್ ಔಷಧಿಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇಂಗ್ಲಿಷ್ ಔಷಧಿಗಳ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೊರೋನಾ ಸೈನಿಕರ ತಂಡದ ತಾಲ್ಲೂಕು ಸಂಯೋಜಕರಾದ ಸ್ಟುಡಿಯೋ ಶ್ರೀನಿವಾಸ ಅವರು ಮಾತನಾಡಿ, ನಮ್ಮ ಹಿರಿಯರ ಆಚಾರ ವಿಚಾರಗಳನ್ನು ಗೌರವದಿಂದ ನಾವೆಲ್ಲರೂ ಸೇರಿ ಪಾಲಿಸಬೇಕು.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಕೋರೋನಾ ವಾರಿಯರ್ಸ್ ತಂಡ, ಶ್ರೀ ಸಾಯಿ ಗಂಗಾ ಫೌಂಡೇಶನ್ ಹಾಗೂ ಆಶಾ ಫೌಂಡೇಶನ್, ಆಯುಷ್ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ಸಲಹಾ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಡಾ.ದೀಪ, ಡಾ.ಸುಂದರ್ ರಾಜ್, ಕಂದಾಯ ಇಲಾಖೆಯ ಕಾರ್ಯದರ್ಶಿ ಕೃಷ್ಣ ನಾಯಕ್, ಸಾಯಿ ಗಂಗಾ ಫೌಂಡೇಶನ್ ಅಧ್ಯಕ್ಷ ಕೆ.ಟಿ. ಗಂಗಾಧರ, ಶೇಖರ್, ಕೋರೋನಾ ಸೈನಿಕರಾದ ಶ್ರೀಧರ್, ಪ್ರಜ್ವಲ್, ಮೋಹನ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಮತ್ತಿತರರು ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post