ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೋ ಸಂರಕ್ಷಣೆ, ಗೋಹತ್ಯೆ ನಿಷೇಧ- ಇತ್ಯಾದಿ ಹೆಸರುಗಳಿಂದ ಪ್ರಸ್ತಾವಿತವಾಗುವ ವಿಷಯ ಭಾರತದಲ್ಲಿ ಬಹುತೇಕ ಗೊಂದಲದ ಗೂಡಾಗಿದೆ.
ಒಂದೆಡೆ ಗೋವನ್ನು ದೇವರು, ತಾಯಿ ಎಂದು ನಾವು ಪ್ರೀತಿಸಿ, ಪೂಜಿಸುತ್ತೇವೆ. ಆದರೆ, ನಮಗೇ ಗೊತ್ತಿಲ್ಲದೇ ಪ್ಲಾಸ್ಟಿಕ್ ಎಂಬ ನಿಧಾನಗತಿಯ ವಿಷವನ್ನು ನೀಡುತ್ತಿದ್ದೇವೆ ಎಂಬುದು ಆಘಾತಕಾರಿ ವಿಚಾರ.
ನಗರ ಪ್ರದೇಶಗಳಲ್ಲಿ ಗೋ ಮಾತೆಯನ್ನು ಸಾಕಿರುವವರು ಅವುಗಳನ್ನು ಬೀದಿ ಬೀದಿಗಳಲ್ಲಿ ಆಹಾರ ಹುಡುಕಿ ತಿನ್ನಲ್ಲೂ ಬಿಟ್ಟು ಅವುಗಳ ಹಾಲು, ಬೆಣ್ಣೆ, ತುಪ್ಪ ಎಲ್ಲವನ್ನು ಉಪಯೋಗಿಸಿಕೊಂಡು ಅವುಗಳು ರಸ್ತೆ ಬದಿಯಲ್ಲಿ ಕೊಳಕು ಆಹಾರ ತಿನ್ನುವ ಶೋಚನೀಯ ಸ್ಥಿತಿಯಲ್ಲಿ ತಂದು ನಿಲ್ಲಿಸಿರುವುದು ಈ ರಾಜ್ಯದ ದೊಡ್ಡ ದುರಂತ!
ಸಿಲಿಕಾನ್ ಸಿಟಿಯಲ್ಲಿ ಪ್ರತಿ ನಿತ್ಯ ಜೀವನದಲ್ಲಿ ರಸ್ತೆಯ ಬದಿಯಲ್ಲಿ ಜನರು ಎಸೆದ ಕೊಳತು ನಾರುವ ಆಹಾರ ಪದಾರ್ಥಗಳನ್ನು ಗೋಮಾತೆ ತಿನ್ನುವ ಮನಕುಲುಕುವ ದೃಶ್ಯಗಳು ಕಾಣುತ್ತಿರುವುದು ವಿಷಾದನೀಯ.
ಇಂತಹ ಪರಿಸ್ಥಿತಿಯಲ್ಲಿ ಗೋವನ್ನು ಕಾಪಾಡುವವವರು ಯಾರು? ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಮನದಲ್ಲಿ ಹಾದು ಹೋಗುತ್ತದೆ! ಇಂತಹುದ್ದೋ ದೃಶ್ಯವೊಂದು ಬನಶಂಕರಿ 3ನೆಯ ಹಂತದ ಕತ್ತರಿ ಗುಪ್ಪೆಯ ವಾಟರ್ ಟ್ಯಾಂಕ್ ಬಳಿ ಇರುವ ಮೈಸೂರು ಮಲ್ಲಿಗೆ ಡಾ. ಕೆ.ಎಸ್. ನರಸಿಂಹ ಸ್ವಾಮಿ ಉದ್ಯಾನವನದ ಹೊರಭಾಗದಲ್ಲಿ ಕಂಡು ಬಂದಿದೆ.
ಉದ್ಯಾನವನದ ಹೊರಭಾಗದಲ್ಲಿ ಹಣ್ಣು ಮತ್ತು ತರಕಾರಿ ವಹಿವಾಟು ಬಹಳ ಜೋರು ಜೋರಾಗಿ ನಡೆಯುತ್ತದೆ. ಕೊಳೆತ ಹಣ್ಣು, ತರಕಾರಿ ಬೆಂಗಳೂರು ಜಲ ಮಂಡಳಿ ಕಚೇರಿಯಿಂದ ಕೊಗಳತೆ ದೂರದಲ್ಲಿ ಪ್ರತಿ ನಿತ್ಯ ಎಸೆಯುತ್ತಾ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಅಲ್ಲಿ ಕೆಲವು ಕುಡುಕರು ತಾವು ಕುಡಿದ ಅಮಲಿನಲ್ಲಿ ಹೆಂಡದ ಬಾಟಲಿ ಎಸೆಯುತ್ತಾ ಪರಿಸರ ಹಾಳು ಮಾಡುತ್ತಿದ್ದಾರೆ. ಇನ್ನು, ಸುಳ್ಳೆಗಳ ಕಡಿತಕ್ಕೆ ಅಲ್ಲಿಗೆ ಬರುವ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದ್ದು, ಅವೆಲ್ಲರ ನಡುವೆ ಅಲ್ಲಿಗೆ ಬರುವ ಗೋವುಗಳು ತ್ಯಾಜ್ಯಗಳನ್ನು ತಿಂದು ಅವುಗಳ ಆರೋಗ್ಯಕ್ಕೆ ತೊಂದರೆ ಆಗುತ್ತಿದೆ.
ಗೋವುಗಳನ್ನು ಸಾಕಿರುವವವರು ಗೋ ಮಾತೇಯನ್ನು ಬೀದಿಗೆ ಬಿಡದೆ ಸಾಕಿ ಎಂಬುದು ನನ್ನ ವಿನಂತಿ ಹಾಗೂ ರಸ್ತೆಯ ಬದಿಯಲ್ಲಿ ಕಸ ಎಸೆಯುವ ಜನರು ಕಸ ಎಸೆಯದೆ ಸ್ವಚ್ಛ ಭಾರತದ ಆಂದೋಲನ ಕ್ಕೆ ಕೈ ಜೋಡಿಸೋಣ ಅಲ್ಲವೇ?
ಕರ್ನಾಟಕದಲ್ಲಿ ತಿದ್ದುಪಡಿ?
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆ-1964 ಜಾರಿಯಲ್ಲಿದೆ. ಅದರ ಪ್ರಕಾರ ಅಕ್ರಮವಾಗಿ ಗೋ ಹತ್ಯೆ ಮಾಡಿದರೆ 6 ತಿಂಗಳು ಜೈಲು ಹಾಗೂ 1 ಸಾವಿರ ರೂ. ದಂಡವಿದೆ. 12 ವರ್ಷದೊಳಗಿನ ಗೋವುಗಳ ಹತ್ಯೆ ನಿಷೇಧಿಸಲ್ಪಟ್ಟಿದೆ. ಪ್ರಾಯವಾದ, ನಿರುಪಯೋಗಿ ಜಾನುವಾರುಗಳನ್ನು ಕಸಾಯಿಖಾನೆಗೆ ತರಬಹುದು; ಆದರೆ ಅನುಮತಿ ಅಗತ್ಯವಿದೆ.
ಪ್ರಸ್ತುತ ಕಾಯಿದೆ ಬಿಗಿಯಾಗಿ ಅನುಷ್ಠಾನವಾಗುತ್ತಿಲ್ಲವಾದ್ದರಿಂದ, ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಉದ್ದೈಶಿಸಿದೆ ಎನ್ನಲಾಗಿದೆ. ಹತ್ಯೆ ಹಾಗೂ ಕಳ್ಳಸಾಗಣೆ ಮಾಡುವವರಿಗೆ 7 ವರ್ಷ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಉದ್ದೈಶಿಸಲಾಗಿತ್ತು. ಇದರಲ್ಲಿ ಗೋವಿನ ಜತೆಗೆ ಎತ್ತು, ಎಮ್ಮೆ, ಎಮ್ಮೆ ಕರುಗಳನ್ನೂ ಸೇರಿಸಲಾಗಿತ್ತು. ಆದರೆ ಈ ತಿದ್ದುಪಡಿ ಪ್ರಸ್ತಾವನೆ ರಾಜ್ಯಪಾಲರಿಂದ ರಾಷ್ಟ್ರಪತಿಗಳಿಗೆ ಹೋಗಿ ಅಲ್ಲಿ ಬಾಕಿಯಾಗಿತ್ತು. ಪ್ರಸ್ತಾವಿತ ಹೊಸ ಕಾಯಿದೆಯಲ್ಲಿ ಅಪರಾಧ ಜಾಮೀನು ರಹಿತ, ಶಿಕ್ಷೆ ಹೆಚ್ಚಳ ಮುಂತಾದ ಇನ್ನಷ್ಟು ಬಿಗಿಯಾದ ಕ್ರಮಗಳಿವೆ ಎಂದು ತಿಳಿದುಬಂದಿದೆ.
ಗೋವಿನ ಮಹತ್ವ
ಗಾವೊ ವಿಶ್ವಸ್ಯ ಮಾತರಂ ಅಂದರೆ ಗೋವು ವಿಶ್ವಕ್ಕೆ ತಾಯಿ ಎಂದರ್ಥ. ಸಮುದ್ರ ಮಂಥನದ ಸಮಯದಲ್ಲಿ ಪ್ರತ್ಯಕ್ಷಗೊಂಡ ಕಾಮಧೇನುವಿನಲ್ಲಿ ಮುಕ್ಕೋಟಿ ದೇವರುಗಳ ಆವಾಸವಿದೆ ಎಂಬುದು ನಮ್ಮ ನಂಬಿಕೆ ಎನ್ನುತ್ತಾರೆ ಮಂಗಳೂರಿನ ಗೋವನಿತಾಶ್ರಯ ಟ್ರಸ್ಟ್ ಕಾರ್ಯದರ್ಶಿ ಪಿ. ಅನಂತ ಕೃಷ್ಣ ಭಟ್.
ಒಂದು ದನದ ಸೆಗಣಿ 5 ಎಕರೆ ಭೂಮಿಯ ಫಲವತ್ತತೆಯನ್ನು ವೃದ್ಧಿಸಬಲ್ಲದು. ಹಾಗೇಯೇ ಒಂದು ದನದ ಮೂತ್ರ 10 ಎಕರೆ ಭೂಮಿಯ ಕೀಟಗಳನ್ನು ನಿಯಂತ್ರಿಸಬಲ್ಲದು. ದೇಶದ ಸರ್ವೋಚ್ಚ ನ್ಯಾಯಾಲಯವೇ ತಿಳಿಸಿರುವಂತೆ, ಒಂದು ಎತ್ತಿನ ಸೆಗಣಿ 4 ಜನರ ಕುಟುಂಬವನ್ನು ಪೋಷಿಸಬಲ್ಲದು.
ಗೋಮೂತ್ರ – ಗೋಮಯಗಳಿಂದ ತಯಾರಿಸಿದ ಗೊಬ್ಬರ, ಬೆಳೆಯ ಸಮೃದ್ಧಿ ಹಾಗೂ ಗುಣಮಟ್ಟಕ್ಕೆ ಪೂರಕವಾಗುತ್ತದೆ. ರಾಸಾಯನಿಕ ಗೊಬ್ಬರಗಳಿಗೆ ಹೋಲಿಸಿದ್ದಲ್ಲಿ, ದನದ ಸೆಗಣಿಯಿಂದ ತಯಾರಿಸಿದ ಗೊಬ್ಬರ 5 ಪಟ್ಟು ನೀರನ್ನು ಉಳಿಸುತ್ತದೆ.
ಗೋವುಗಳು ಹಾಲು ಮೊಸರು, ಬೆಣ್ಣೆ, ತುಪ್ಪ ಮಾತ್ರವಲ್ಲದೆ ,ಶೇಕಡ 80% ರಷ್ಷು ಕೃಷಿ ಕೆಲಸ ಮತ್ತು ಕೃಷಿ ಉತ್ಪನ್ನಗಳ ಸಾಗಣಿಗೆ ಗೋವಿನ ಮೂಲಕವೇ ನಡೆಯುತ್ತದೆ. ಗೋವು ನಮ್ಮ ಆರ್ಥಿಕತೆಯ ಬೆನ್ನಲುಬು ಕೊಡ ಹೌದು.
Get In Touch With Us info@kalpa.news Whatsapp: 9481252093
Discussion about this post