ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಕೋಟ್ಯಂತರ ಭಾರತೀಯರ ಕನಸಾಗಿರುವ ಅಯೋಧ್ಯೆ #Ayodhya ರಾಮಮಂದಿರ ಉದ್ಘಾಟನೆ 2024ರ ಜನವರಿ 22ರಂದು ಅದ್ದೂರಿಯಾಗಿ ನಡೆಯಲಿದ್ದು, ಸಮಾರಂಭದ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯವನ್ನು ಆರಂಭಿಸಲಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾದ್ಯಮಗಳು ಸುದ್ದಿ ಪ್ರಕಟಿಸಿದ್ದು, ರಾಮ ಲಲ್ಲಾ #Ramalalla ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನ ಪತ್ರಿಕೆಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಕಳುಹಿಸಲು ಆರಂಭಿಸಲಾಗಿದೆ.
ಅಯೋಧ್ಯೆಯಲ್ಲಿ ನಡೆಯುವ `ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನಾ ಸಮಾರಂಭ)ದಲ್ಲಿ ಪಾಲ್ಗೊಳ್ಳಲು ಸುಮಾರು 6,000 ಆಯ್ದ ವ್ಯಕ್ತಿಗಳಿಗೆ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗುತ್ತದೆ.
ಪ್ರಮುಖವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ, #NarendraModi ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #Yogiadityanath ಸೇರಿದಂತೆ ಪ್ರಮುಖರು ರಾಮ ಮಂದಿರದ #Ramamandira ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಟ್ರಸ್ಟ್ ಕಳುಹಿಸಿದ ಮೊದಲ ಪತ್ರವನ್ನು ಸ್ವೀಕರಿಸಿದ್ದೇನೆ ಎಂದು ಸಂತರೊಬ್ಬರು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ವರದಿಯಾಗಿದೆ. ಅಂಚೆ ಮೂಲಕ ಪತ್ರ ಸಿಕ್ಕಿದ್ದು, ಆಮಂತ್ರಣ ಪತ್ರದ ಮೊದಲ ವ್ಯಕ್ತಿ ಎಂಬುದಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಯಾವ ಹಂತದಲ್ಲಿದೆ ಕಾಮಗಾರಿ?
ರಾಮ ಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, ರಾಮ್ ಲಲ್ಲಾದ ಮೂರು ಆವೃತ್ತಿಗಳನ್ನು ತಯಾರಿಸಲಾಗುತ್ತಿದೆ. ಅವುಗಳಲ್ಲಿ ಉತ್ತಮವಾದವು ಉದ್ಘಾಟನಾ ದಿನಾಂಕದ ಸಮೀಪದಲ್ಲಿ ಆಯ್ಕೆಯಾಗಲಿದೆ ಎಂದು ವರದಿಯಾಗಿದೆ.
ಈ ಕೊನೆಯ ಹಂತದ ತಯಾರಿಯಲ್ಲಿ, ನಿರ್ಬಂಧಿತ ವಿಶೇಷ ಸ್ಥಳದಲ್ಲಿ ರಾಮ್ ಲಲ್ಲಾ ಅವರ ಮೂರು ಆವೃತ್ತಿಗಳನ್ನು ತಯಾರಿಸಲಾಗುತ್ತಿದೆ. ಗರ್ಭಗುಡಿಯ ಮೇಲೆ ಪ್ರತಿಷ್ಠಾಪನೆಗೆ ಅಂತಿಮ ಆವೃತ್ತಿಯನ್ನು ಈ ತಿಂಗಳು ಆಯ್ಕೆ ಮಾಡುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post