ಮುಖ್ಯಾಂಶಗಳು:
- ಭಾರತದ ಜಿಡಿಪಿ ಬೆಳವಣಿಗೆಯು ಎರಡು ವರ್ಷಗಳಲ್ಲಿ 7.5% ಗೆ ಏರಿಕೆಯಾಗುತ್ತದೆ ಎಂದು ವಿಶ್ವ ಬ್ಯಾಂಕ್ ಊಹಿಸಿದೆ
- ಅಪನಗದೀಕರಣ ಹಾಗೂ ಜಿಎಸ್’ಟಿಗಳು ಅನೌಪಚಾರಿಕ ವ್ಯವಸ್ಥೆಯಿಂದ ಔಪಚಾರಿಕ ವ್ಯವಸ್ಥೆಗೆ ಬದಲಾಯಿಸುತ್ತಿದೆ
- 2018-19ರಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಹತ್ವ ಆರ್ಥಿಕತೆ ಭಾರತ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪದೇ ಪದೇ ಜಾಗತಿಕಮಟ್ಟದ ಸಂಸ್ಥೆಗಳು ಸ್ವಾಗತಿಸುತ್ತಿರುವ ಬೆನ್ನಲ್ಲೇ, ವಿಶ್ವಬ್ಯಾಂಕ್ ಮತ್ತೊಮ್ಮೆ ಮುಕ್ತಕಂಠದಿಂದ ಶ್ಲಾಘಿಸಿದೆ.
ಭಾರತ 2018-19ರಲ್ಲಿ ಜಾಗತಿಕವಾಗಿ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕ ವ್ಯವಸ್ಥೆಯಾಗಿದೆ ಎಂದು ನಿನ್ನೆ ಬಿಡುಗಡೆ ಮಾಡಿರುವ ವರದಿಯಲ್ಲಿ ವಿಶ್ವಬ್ಯಾಂಕ್ ಉಲ್ಲೇಖಿಸಿದೆ.
ಅತ್ಯಂತ ಪ್ರಮುಖವಾಗಿ ಭಾರತದ ಜಿಡಿಪಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇ.7.3ರಷ್ಟಿದ್ದು, ಈ ವರ್ಷದಾಂತ್ಯಕ್ಕೆ ಚೀನಾದ ಜಿಡಿಪಿ ಶೇ.6.3ಕ್ಕೆ ನಿಲ್ಲುವ ಮೂಲಕ ಭಾರತದ ಮುಂದೆ ಅದು ತಲೆಬಾಗಲಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಮಹತ್ವದ ಹಣ ಅಪನಗದೀಕರಣ ಹಾಗೂ ಜಿಎಸ್’ಟಿಯನ್ನು ವಿಶ್ವಬ್ಯಾಂಕ್ ಪ್ರಶಂಸಿಸಿದ್ದು, ಈ ಎರಡೂ ನಿರ್ಧಾರಗಳು ಭಾರತದ ಆರ್ಥಿಕತೆಯನ್ನು ಅನೌಪಚಾರಿಕ ವಲಯದಿಂದ, ಔಪಚಾರಿಕ ವಲಯಕ್ಕೆ ತರಲಿದ್ದು, ಇದು ದೇಶದ ಭದ್ರ ಬುನಾದಿಯಾಗಿದೆ ಎಂದಿದೆ.
Discussion about this post