ಶ್ರೀನಗರ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ, ಗಡಿ ದಾಟಿ ಬಂದಿದ್ದ ಪಾಕ್ ವೃದ್ಧನನ್ನು ಸದ್ಭಾವನಾ ಸಂಕೇತವಾಗಿ ಸುರಕ್ಷಿತವಾಗಿ ಭಾರತೀಯ ಸೇನೆ ಹಸ್ತಾಂತರಿಸಿದೆ.
ಶುಕ್ರವಾರ ಸಾಂಬಾ ವಲಯದಲ್ಲಿ ಗಡಿದಾಟಿ ಬಂದಿದ್ದ ಮೊಹಮದ್ ಅಶ್ರಫ್(60) ಎಂಬ ವೃದ್ಧನನ್ನು ಬಿಎಸ್’ಎಫ್ ಯೋಧರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೇ ವೃದ್ಧನಿಂದ 12 ಸಾವಿರ ರೂ. ಮೌಲ್ಯದ ಪಾಕಿಸ್ಥಾನ ಕರೆನ್ಸಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಇದೇ ವೇಳೆ ಎರಡೂ ದೇಶಗಳ ನಡುವಿನ ಸದ್ಬಾವನಾ ಸಂಕೇತವಾಗಿ ವೃದ್ಧನನ್ನು ಸುರಕ್ಷಿತವಾಗಿ ಪಾಕಿಸ್ಥಾನದ ರೇಂಜರ್’ಗಳಿಗೆ ಹಸ್ತಾಂತರ ಮಾಡಲಾಗಿದೆ.
ಭಾರತೀಯ ಸೇನೆಯ ಮಾನವೀಯತೆ ಹಾಗೂ ಸದ್ಬಾವನೆಯನ್ನು ಪಾಕ್ ರೇಂಜರ್’ಗಳು ಪ್ರಶಂಸಿಸಿದ್ದು, ಇಡಿಯ ಏಷ್ಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.







Discussion about this post