ನವದೆಹಲಿ: ಪಾಕಿಸ್ಥಾನ ನಮ್ಮ ಸೇನಾ ಪಡೆಗಳನ್ನು ಟಾರ್ಗೆಟ್ ಮಾಡಿದ್ದು, ನಿನ್ನೆ ನಮ್ಮ ಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿ ದಾಳಿಗೆ ಯತ್ನಿಸಿದೆ ಎಂಬುದಕ್ಕೆ ಭಾರತ ಸರ್ಕಾರ ದಾಖಲೆ ಬಿಡುಗಡೆ ಮಾಡುವ ಮೂಲಕ ಪಾಕಿಸ್ಥಾನದ ಮಾನ ಮರ್ಯಾದೆಯನ್ನು ಹರಾಜು ಹಾಕಿದೆ.
ಇಂದು ಸಂಜೆ ನವದೆಹಲಿಯಲ್ಲಿ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏರ್ ವೈಸ್ ಮಾರ್ಷಲ್ ರವಿ ಕಪೂರ್, ಪಾಕಿಸ್ಥಾನ ಹೇಳಿರುವ ವಿಚಾರಗಳು ಸತ್ಯಕ್ಕೆ ದೂರವಾಗಿದೆ. ಪಾಕಿಸ್ತಾನದ ವಿಮಾನವನ್ನು ನಾವು ಹೊಡೆದು ಹಾಕಿರುವುದು ಸತ್ಯ ಎಂದು ಸ್ಪಷ್ಟಪಡಿಸಿದರು.
Visuals of cover of AARAM missile fired from Pakistani F-16 aircraft found near the LoC in India pic.twitter.com/qHdOm5cDqN
— ANI (@ANI) February 28, 2019
ಭಾರತದ ಒತ್ತಡಕ್ಕೆ ಮಣಿದಿರುವ ಪಾಕಿಸ್ಥಾನ ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಒಪ್ಪಿರುವುದು ಸಂತಸದ ಸಂಗತಿ. ಇದು ಭಾರತ ಸರ್ಕಾರದ ರಾಜತಾಂತ್ರಿಕತೆಗೆ ದೊರೆತ ಗೆಲುವು ಎಂದರು.
ಪಾಕಿಸ್ತಾನದ ಎಫ್ -16 ಯುದ್ಧ ವಿಮಾನಗಳು ಭಾರತದತ್ತ ಬರುತ್ತಿರುವುದು ರಡಾರ್ ನಲ್ಲಿ ಪತ್ತೆಯಾಗಿತ್ತು. ನಮ್ಮ ನೆಲೆಗಳನ್ನು ಗುರಿಯಾಗಿ ದಾಳಿ ನಡೆಸಲು ಎಫ್ -16 ವಿಮಾನಗಳು ಬರುತ್ತಿರುವುದು ಪತ್ತೆಯಾಗಿದ್ದರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ದಾಳಿ ನಡೆಸಿ ಆ ವಿಮಾನವನ್ನು ಹೊಡೆದುರುಳಿಸಲಾಯಿತು ಎಂದು ತಿಳಿಸಿದರು.
WATCH: Joint press briefing by the Army, Navy and the Air Force in New Delhi https://t.co/SooRKNi5T1
— ANI (@ANI) February 28, 2019
ಈ ಕಾರ್ಯಾಚರಣೆ ವೇಳೆಯಲ್ಲಿ ನಮ್ಮ ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ.ದಾಳಿ ಬಗ್ಗೆ ಪಾಕಿಸ್ತಾನ ಹಲವು ಸುಳ್ಳು ಹೇಳಿಕೆಗಳನ್ನು ನೀಡಿತ್ತು. ಮೊದಲಿಗೆ ಮೂರು ಪೈಲಟ್ ಗಳಿದ್ದಾರೆ ಎಂದಿದ್ದ ಪಾಕಿಸ್ತಾನ ನಂತರ ಒಬ್ಬರು ಪೈಲಟ್ ಇದ್ದರೆಂದು ಹೇಳಿಕೆ ನೀಡಿತ್ತು ಎಂದು ಹೇಳಿದರು.
ಎಫ್-16 ವಿಮಾನಗಳು ಭಾರತದ ಗಡಿ ಪ್ರವೇಶಿಸಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಅದರ ಬಿಡಿ ಭಾಗಗಳನ್ನು ಭಾರತದ ಗಡಿಪ್ರದೇಶದೊಳಗೆ ವಶಪಡಿಸಿಕೊಂಡಿರುವುದಾಗಿ ಆರ್ ಜಿಕೆ ಕಪೂರ್ ಹೇಳಿದರು.
Discussion about this post