ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರ ತೆಗೆದುಕೊಂಡಿರುವ ಭಾರತ ಎಲ್’ಒಸಿಯಲ್ಲಿ ಇಂದು ನಸುಕಿನಲ್ಲಿ ನಡೆಸಿದ ವೈಮಾನಿಕ ದಾಳಿ ಯಶಸ್ವಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು, ಇಡಿಯ ಕಾರ್ಯಾಚರಣೆಯ ಕುರಿತಾಗಿ ಪ್ರಧಾನಿಯವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಇಂದು ಮುಂಜಾನೆ ಪ್ರಧಾನಿಯವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ ಧೋವಲ್ ಅವರು, ಇಡಿಯ ಕಾರ್ಯಾಚರಣೆಯ ರೂಪುರೇಷೆ, ಕಾರ್ಯಗತ ಹಾಗೂ ಕಾರ್ಯಾಚರಣೆಯ ಯಶಸ್ಸಿನ ಕುರಿತಾಗಿ ಮಾಹಿತಿ ನೀಡಿದ್ದಾರೆ.
Delhi: Meeting of Cabinet Committee on Security underway at 7, LKM pic.twitter.com/sCq0MZSB2u
— ANI (@ANI) February 26, 2019
ಪ್ರಧಾನಿಯವರ ಅನುಮತಿಗಾಗಿ ನಿರೀಕ್ಷೆ ಮಾಡುತ್ತಿರುವ ಭಾರತೀಯ ವಾಯು ಸೇನೆ ಇನ್ನು ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
Discussion about this post