ಒಡಿಶಾ: ಭಾರತೀಯ ನಿರ್ಮಿತ ಪ್ರತಿಬಂಧಕ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ನಿನ್ನೆ ರಾತ್ರಿ ಒಡಿಶಾ ಕರಾವಳಿಯಿಂದ ನಡೆಸಿದ ಪ್ರಯೋಗಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಪ್ರಮುಖವಾಗಿ ಎರಡು ಹಂತದ ಬ್ಯಾಲೆಸ್ಟಿಕ್ ಮಿಸೈಲ್ ಡಿಫೆನ್‌ಸ್ ಸಿಸ್ಟಂನಲ್ಲಿ ಇದು ದೊಡ್ಡ ಕೊಡುಗೆಯಾಗಿದೆ.
ಒಡಿಶಾದ ಅಬ್ದುಲ್ ಕಲಾಂ ದ್ವೀಪದಿಂದ ಉಡಾವಣೆ ಮಾಡಲಾಗಿದ್ದು, ಇಂಟಿಗ್ರೇಡೆಟ್ ಟೆಸ್‌ಟ್ ರೇಂಜ್ ನಿಂದ ಯಶಸ್ವಿ ಪ್ರಯೋಗ ನಡೆದಿದೆ.
ಭೂಕಕ್ಷೆಯಿಂದ ಸುಮಾರು 50 ಕಿಮೀ ನಭಕ್ಕೆ ಹಾರುವ ಈ ಭಾರತೀಯ ನಿರ್ಮಿತ ಕ್ಷಿಪಣೆ ದೇಶದ ಭದ್ರತಾ ವ್ಯವಸ್ಥೆಗೆ ಸಹಕಾರಿ ಎಂದು ಡಿಆರ್‌ಡಿಒ ಹೇಳಿದೆ.
















