ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ಹರಡುವಿಕೆ ಆತಂಕದ ನಡುವೆಯೇ ಕೇಂದ್ರ ಗೃಹ ಇಲಾಖೆ ಅನ್ ಲಾಕ್ 4.0 ಘೋಷಣೆ ಮಾಡಿದ್ದು, ಸೆ.30ರವರೆಗೂ ಶಾಲಾ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿಲ್ಲ.
ಈ ಕುರಿತಂತೆ ಅನ್ ಲಾಕ್ 4.0 ಮಾರ್ಗಸೂಚಿ ಘೋಷಣೆ ಮಾಡಿದ್ದು, ಕಂಟೈನ್ಮೆಂಟ್ ಝೋನ್’ಗಳಲ್ಲಿ ಮಾತ್ರ ಲಾಕ್ ಡೌನ್’ಗೆ ಅವಕಾಶ ನೀಡಲಾಗಿದ್ದು, ರಾಜ್ಯದಾದ್ಯಂತ ಎಲ್ಲೂ ಲಾಕ್ ಡೌನ್ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಯಾವುದಕ್ಕೆ ಅವಕಾಶವಿಲ್ಲ?
- ಸೆ.30ರವರೆಗೂ ಶಾಲಾ, ಕಾಲೇಜುಗಳನ್ನು ತೆರೆಯುವಂತಿಲ್ಲ
- ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ ತೆರೆಯುವಂತಿಲ್ಲ
- ಅಂತಾರಾಷ್ಟ್ರೀಯ ವಿಮಾನ ಸಂಚಾರ ಮುಂದುವರೆದು ನಿರ್ಬಂಧ
- ಪಾರ್ಕ್ ಹಾಗೂ ಮನೋರಂಜನಾ ಪಾರ್ಕ್ ತೆರೆಯಲು ಅವಕಾಶವಿಲ್ಲ
ಯಾವುದಕ್ಕೆ ಅವಕಾಶ?
- ಸಭೆ ಸಮಾರಂಭಗಳಲ್ಲಿ 100 ಜನ ಸೇರಲು ಅವಕಾಶ
- ಆನ್ ಲೈನ್ ಶಿಕ್ಷಣ ಪದ್ದತಿ ಮುಂದುವರಿಕೆ
- ಬಯಲು ರಂಗಮಂದಿರ ತೆರೆಯಲು ಅವಕಾಶ
- ರಿಸರ್ಚ್’ಗಳಿಗೆ ಅವಕಾಶ
Get In Touch With Us info@kalpa.news Whatsapp: 9481252093
Discussion about this post