ನವದೆಹಲಿ: ಇಂದು ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯವಾದ ದಿನ. ಈ ಸಂದರ್ಭದಲ್ಲಿ ನನ್ನ ಸಂಸದ ಸಹೋದ್ಯೋಗಿಗಳು ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಇದೇ ವೇಳೆ ಇಡಿಯ ಭಾರತ ನಮ್ಮನ್ನು ಗಮನಿಸುತ್ತಿದೆ ಎನ್ನುವುದನ್ನು ಎಲ್ಲ ಸಂಸದರೂ ಗಮನದಲ್ಲಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ನಮ್ಮ ಪ್ರಜಾಪ್ರಭುತ್ವದಲ್ಲಿ ಇಂದು ಮುಖ್ಯವಾದ ದಿನ. ಈ ಸಂದರ್ಭವನ್ನು ನನ್ನೆಲ್ಲಾ ಸಹೋದ್ಯೋಗಿಗಳು ಸದುಪಯೋಗ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಸಂಸತ್ತಿನಲ್ಲಿ ಗೌರವಯುತವಾಗಿ ನಡೆದುಕೊಂಡು ರಚನಾತ್ಮಕ ಚರ್ಚೆ ನಡೆಸಿ ಉತ್ತಮ ಆಡಳಿತವನ್ನು ಜನತೆಗೆ ನೀಡೋಣ, ಆ ಮೂಲಕ ಸಂವಿಧಾನವನ್ನು ರಚಿಸಿದವರಿಗೆ ಗೌರವ ಸಲ್ಲಿಸೋಣ, ದೇಶದ ಜನತೆ ನಮ್ಮನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ ಎಂದಿದ್ದಾರೆ.
Today is an important day in our Parliamentary democracy. I am sure my fellow MP colleagues will rise to the occasion and ensure a constructive, comprehensive & disruption free debate. We owe this to the people & the makers of our Constitution. India will be watching us closely.
— Narendra Modi (@narendramodi) July 20, 2018
ಇನ್ನು, ಎನ್‌ಡಿಯ ಜೊತೆಯಿಂದ ಹೊರಬಂದಿರುವ ಟಿಡಿಪಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಬೆಂಬಲಿಸಿದ್ದು, ಇಂದು ಚರ್ಚೆ ನಡೆಯಲಿದೆ.
Discussion about this post