ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭ ಚಕ್ರದಲ್ಲಿ ಮೂರು ದ್ರೇಕ್ಕಾಣಗಳು ಅಪಾಯಕಾರಿ. ಈ ದ್ರೇಕ್ಕಾಣದಲ್ಲಿ ಶನಿ ಸಂಚಾರ ಮಾಡುವಾಗ ಅಪಾಯ ತರುತ್ತಾನೆ. ಅಪಾಯದ ಪರಮಾವಧಿಯು ಶನಿಯ ಜತೆ ಕುಜ ಯುತಿಯಾದಾಗ ಇರುತ್ತದೆ.
ಕರ್ಕ ರಾಶಿಯ ಮೊದಲ ಹತ್ತು ಡಿಗ್ರಿಯು ಕೋಲ ದ್ರೇಕ್ಕಾಣ. ಕೋಲ ಎಂದರೆ ಹಂದಿಯ ಸ್ವರೂಪ. ಅದರ ಅಧಿಪತಿ ಚಂದ್ರ. ಇಲ್ಲಿ ಯಾವಾಗ ಯಾವಾಗ ಶನಿ ಚಂದ್ರ ಯುತಿಯಾಗುತ್ತದೋ ಆವಾಗ ರೋಗೋತ್ಪತ್ತಿ ಆಗುತ್ತದೆ. ಹಂದಿ ಜ್ವರ, ಮಂಗನ ಕಾಯಿಲೆ ಇತ್ಯಾದಿ. ಇದೆಲ್ಲ ಕಳೆದು ಹೋಯಿತು.
ನಂತರ ಶನಿಯು ವೃಶ್ಚಿಕದ ಮೊದಲ ದ್ರೇಕ್ಕಾಣವಾದ ಭುಜಂಗ ದ್ರೇಕ್ಕಾಣ ಸಂಚಾರದಲ್ಲಿ(ಭುಜಂಗ ಎಂದರೆ ಘಟ ಸರ್ಪ) ಕುಜ ಯುತಿಯೂ ಇದ್ದ ಸಮಯದಲ್ಲಿ ಜನರು ಅಸಹಜ ಸಾವಿಗೀಡಾದರು. ರೈತರ ಆತ್ಮಹತ್ಯೆ, ಅಧಿಕಾರಿಗಳ ಕೊಲೆ, ಸಾಮಾಜಿಕವೋ, ಪಕ್ಷದವರೋ ಆದಂತಹ ಕಾರ್ಯಕರ್ತರ ಹತ್ಯೆ ನಡೆಯುತ್ತದೆ. ಈ ದ್ರೇಕ್ಕಾಣದ ಅಧಿಪತಿ ಕುಜ.
ಈಗ ಮಕರ ರಾಶಿಯ ಮೊದಲ ಹತ್ತು ಡಿಗ್ರಿಯ ನೀಗಡ ದ್ರೇಕ್ಕಾಣದಲ್ಲಿ ಶನಿ ಸಂಚಾರವಾದಾಗ ಮಹಾವ್ಯಾಧಿಗಳು ಉದ್ಭವಿಸಿದವು. ಈ ದ್ರೇಕ್ಕಾಣಕ್ಕೆ ಬಂಧನ, ಸಂಕೋಲೆ, ಪಾಶ ಎಂಬಿತ್ಯಾದಿ ಹೆಸರುಗಳುವೆ. ಅಂದರೆ ಹೆಸರೇ ಸೂಚಿಸುವಂತೆ ನಮ್ಮನ್ನು ನಾವೇ ಬಂಧಿಸಿಕೊಳ್ಳುವಿಕೆ, ಸರಕಾರ ಬಂಧನದಲ್ಲಿ (ಕ್ವಾರಂಟೈನ್) ಇಡುವುದು ಇತ್ಯಾದಿ ನಡೆಯುತ್ತಿದೆ.
ಕೊರೋನ ಮಹಾವ್ಯಾಧಿಯ ಪರಿಣಾಮವಾಗಿ ಜನಸಾಮಾನ್ಯರ ಆರ್ಥಿಕತೆ, ಕಂದಾಯ ಇಲಾಖೆ, ಬ್ಯಾಂಕಿಂಗ್ ಸೆಕ್ಟರ್, ಸಾರಿಗೆ, ವಿದ್ಯುತ್, ಕೃಷಿ ಇಲಾಖೆ, ವಿದ್ಯಾ ಇಲಾಖೆ, ಇತರ ಉದ್ದಿಮೆಗಳು ತೀವ್ರ ಸಂಕಷ್ಟಕ್ಕೊಳಗಾಗಿ, ನೌಕರರಿಗರ ವೇತನ ಕೊಡಲೂ ಕಷ್ಟವಾಗುವ ಪರಿಸ್ಥಿತಿ ಎದುರಾಗಲಿದೆ.
ಪ್ರಜೆಗಳು ಇದಕ್ಕೆಲ್ಲ ಸಹಕರಿಸಲೇಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆ. ಇದಕ್ಕೆಲ್ಲ ಸರಕಾರ ಮಾತ್ರ ಹೊಣೆಯಲ್ಲ. ನಾವೂ ಹೊಣೆಗಾರರೆ ಎಂದು ಯೋಚಿಸಬೇಕು.
ಈ ಸಲ ಈ ದ್ರೇಕ್ಕಾಣವನ್ನು ಮಾಮೂಲು ದಾಟಿ ಹೋಗುವ ಸಮಯಕ್ಕಿಂತ ಸ್ವಲ್ಪ ತಡವಾಗಿ ದಾಟುತ್ತಾನೆ. ಯಾಕೆಂದರೆ ಶನಿಗೆ ವಕ್ರತ್ವ ಬರುತ್ತದೆ. ಈಗ ಕುಜ ಯುತಿಯೂ ಇರುವುದರಿಂದ ಈ ರೋಗವು extremeಗೆ ಹೋಗುತ್ತದೆ. ಇದು ಕುತ್ತಿಗೆ ಭಾಗದಿಂದ ನುಸುಳವ ರೋಗ. ಇದನ್ನು ಪುರಾತನ ಆಯುರ್ವೇದ ಜ್ಯೋತಿಷ್ಯದಲ್ಲಿ ಕಂಠ ರೋಹಿಣಿ ಜ್ವರ ಎಂದರು.
ಸುಮಾರು ಮುಂದಿನ ವರ್ಷ ಫೆಬ್ರವರಿಗೆ ಶನಿಯು ಈ ಮೊದಲ ಹತ್ತು ಡಿಗ್ರಿಯನ್ನು ದಾಟುವ ಕಾರಣ ಅಲ್ಲಿಯವರೆಗೆ ರೋಗ ಭಯ ಹೋಗಲಾರದು. ಈಗ ಕುಜ ಯುತಿ ಇರುವುದರಿಂದ ರೋಗದ ಪ್ರಬಲತೆ ಜಾಸ್ತಿ. ಇನ್ನು ಈ ಕುಜನು ಮೇ ಐದಕ್ಕೆ ಈ ರಾಶಿ ದಾಟಿದ ಮೇಲೆ ರೋಗ ಹತೋಟಿಗೆ ಬರಲಿದೆ. ಆಗ ಇದರ ನಿವಾರಣೆಯ ಔಷಧಿಯೂ ಸಿಗಲಿದೆ. ಆದರೂ ಪೂರ್ಣ ರೋಗ ಭಯ ಹೋಗಬೇಕಾದರೆ ಮುಂದಿನ ವರ್ಷ ಫೆಬ್ರವರಿಯವರೆಗೆ ಕಾಯಲೇಬೇಕು.
ಪರಿಹಾರ
ದೇವತಾನುಗ್ರಹ ಪಡೆಯುವುದು ಮೊದಲನೆಯದ್ದಾದರೆ, ಎರಡನೆಯದ್ದು ಸರಕಾರದ ಆದೇಶ ಪಾಲನೆ, ವೈದ್ಯರುಗಳ ಸಲಹೆಯಂತೆ ನಡೆದುಕೊಳ್ಳುವುದು
ಆಗಿರುತ್ತದೆ.
ಸಮುದ್ರ ಮಥನ ಕಾಲದಲ್ಲಿ ಉಕ್ಕೇರಿದ ಹಾಲಾಹಲವನ್ನು ಕುಡಿದವನು ಶಿವ. ಈಗ ಉಕ್ಕೇರುತ್ತಿರುವ ಈ ವಿಷಯುಕ್ತ ರೋಗಕ್ಕೂ ಅವನನ್ನೇ ಮೊರೆ ಹೋಗಬೇಕಾಗುತ್ತದೆ. ಕರ್ನಾಟಕದ ನಂಜುಡೇಶ್ವರ ಕ್ಷೇತ್ರದಲ್ಲೇ ಈ ರೋಗದ ಪ್ರತಾಪ ತೋರಿಸಿಕೊಟ್ಟ. ಬಹುಷಃ ಪ್ರಜೆಗಳ ದೋಷವೇ ಇದಕ್ಕೆ ಕಾರಣ. ನಂಜು ಎಂಬುದೇ ವಿಷ. ಅದರ ಹೆಸರಿನಲ್ಲೇ ಶಿವನಿರುವನು. ಹಾಗಾಗಿ ನಾಡಿನ ಸಮಸ್ತ ಪ್ರಜೆಗಳು ಅವನಿಗೇ ಶರಣಾಗಬೇಕು. ಕುಜನು ಸುಬ್ರಹ್ಮಣ್ಯ ಸ್ವರೂಪ. ಈ ಕುಜನ ಯುತಿಯಲ್ಲೇ ರೋಗವು ತಾರಕ್ಕೇರಿದ್ದು. ಇನ್ನೂ ಒಂದು ತಿಂಗಳ ಕಾಲ ಕುಜನು ಶನಿಯೊಡನೆ ಇದ್ದಾನೆ. ಶನಿ ಕುಜರ ಯುತಿಯು ಒಂದು ರೀತಿಯ ಪೋಲೀಸರ ಅಟ್ಟಹಾಸದ ಸೂಚನೆ. ಅಂದರೆ ಜನರ ನಿಯಂತ್ರಣಕ್ಕಾಗಿ ಪೋಲೀಸರು at any cost ನಿರ್ಧಾರ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ಅವರ ಯಶಸ್ಸಿಗಾಗಿಯೂ, ಆರೋಗ್ಯಕ್ಕಾಗಿಯೂ, ಸರ್ವ ಜನಹಿತಕ್ಕಾಗಿಯೂ ಸುಬ್ರಹ್ಮಣ್ಯನನ್ನು ಸ್ಮರಿಸಬೇಕು. ಕೊರೋನ ಎಂಬುದು ಒಂದು ಮಹಾಮಾರಿ ಆಗಿರುವುದರಿಂದ ಇದರ ನಿವಾರಣೆಗಾಗಿ ಪಾರ್ವತಿ(ಮಹಾಕಾಳಿ) ಯನ್ನೂ ಮೊರೆ ಹೋಗಬೇಕು. ಇದರಿಂದ ಉಲ್ಭಣಿಸುವ ಪ್ರಮಾಣ ಶಮನಗೊಂಡು ಪರಿಹಾರವೂ ಸಿಗಲಿದೆ. ಒಂದಂತೂ ಸತ್ಯ. ಸ್ವಲ್ಪ ಮಟ್ಟಿನ ಸಾವು ನೋವುಗಳಾದರೂ, ಈ ದೇಶದ ಪ್ರಜೆಗಳಿಗೆ ಅಂತಹ ದೊಡ್ಡ ತೊಂದರೆ ಬರುವುದಿಲ್ಲ. ಯಾಕೆಂದರೆ ಜಗತ್ತಿನ ಸಕಲ ಶಕ್ತಿಗಳನ್ನೂ ವಿಭಾಗಿಸಿ ದೇವತಾ ಸ್ವರೂಪಗಳ ಆರಾಧನೆ ಮಾಡುವಂತಹ ಇಡೀ ಜಗತ್ತಿನಲ್ಲಿ ಇರುವ ದೇಶ ಎಂದರೆ ಭಾರತ ಮಾತ್ರ.
Get in Touch With Us info@kalpa.news Whatsapp: 9481252093
Discussion about this post