ಶ್ರೀನಗರ: ಪಾಕಿಸ್ತಾನದ ಶೆಲ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಸೇನಾ ಆಡಳಿತ ಕೇಂದ್ರ ಕಚೇರಿಯ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.
ಪೂಂಚ್ ಜಿಲ್ಲೆಯ ಎಲ್‌ಒಸಿ ಗಡಿಯಲ್ಲಿ ಅಕ್ಟೋಬರ್ 23ರಂದೇ ಭಾರತೀಯ ಸೇನೆ ಈ ದಾಳಿ ನಡೆಸಿದೆ ಎಂದು ಹೇಳಲಾಗಿದ್ದು, ಇಂದು ಬಹಿರಂಗಗೊಂಡಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ದಾಳಿಗೆ ಸಾಕ್ಷಿಯಾಗಿ ಪೂಂಚ್ ಜಿಲ್ಲೆಯ ಸುತ್ತಲಿನ ಪ್ರದೇಶದಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿದೆ.
ಈ ಭಾಗದಲ್ಲಿ ಪಾಕ್ ಸೈನಿಕರ ಒಳನುಸುಳುವಿಕೆ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಭಾರತೀಯ ಸೇನೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
ಜಮ್ಮು ಕಾಶ್ಮೀರದ ಉರಿ ಮತ್ತು ನಾಗ್ರೋತಾ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ 2016 ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಸರ್ಜಿಕಲ್ ಸ್ಟೈಕ್ ನಡೆಸಿದ ಎರಡು ವರ್ಷದ ನಂತರ ಪಾಕ್ ಮೇಲೆ ನಡೆಸಿರುವ ದೊಡ್ಡಮಟ್ಟದ ದಾಳಿ ಇದಾಗಿ ಎನ್ನಲಾಗಿದೆ.
Discussion about this post