ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚೆನ್ನೈ: ಇತ್ತೀಚೆಗೆ ನಮ್ಮನ್ನಗಲಿದ ವಿಶ್ವ ಕಂಡ ಏಕೈಕ ಅಪ್ರತಿಮ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ನೆನೆಸಿಕೊಂಡ ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಕಣ್ಣೀರು ಹಾಕಿದ್ದಾರೆ.
ಈ ಕುರಿತಂತೆ ತಮ್ಮ ಅಧಿಕೃತ ಖಾತೆಯಲ್ಲಿ ವೀಡಿಯೋ ಸಂದೇಶ ನೀಡಿರುವ ಅವರು, ನೆಲ್ಲೂರು ಬಳಿಯ ಗೂಡೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲು ನಾನು ಅಲ್ಲಿಗೆ ತೆರಳಿದ್ದೆ. ಅಲ್ಲಿ ವಿಜೇತರಾಗಿದ್ದ ಎಸ್’ಪಿಬಿ ಹಾಡು ಹಾಡಿದರು. ಆಗ ಅವರನ್ನು ಕರೆದು ನೀವು ಯಾರನ್ನೂ ಅನುಕರಿಸದೇ ಸ್ವಂತ ಧ್ವನಿಯಲ್ಲಿ ಹಾಡಿದ್ದೀರಿ. ನೀವು ಸಿನಿಮಾದಲ್ಲಿ ಹಾಡಿದರೆ ತುಂಬಾ ಬ್ರಹ್ಮಾಂಡವಾಗಿ ಹೆಸರು ಬರುತ್ತದೆ ಎಂದಿದ್ದೆ ಎಂದಿದ್ದಾರೆ.
ಆನಂತರ ಅವರ ಮೊನ್ನೆಯವರೆಗೂ ಹಲವಾರು ಕಾರ್ಯಕ್ರಮಗಳಲ್ಲಿ ಜಾನಕಿಯಮ್ಮ ಹಾಗೆ ಹೇಳಿದ್ದಕ್ಕೆ ನಾನು ಮೇಲೆ ಬಂದೆ ಎಂದು ಹೇಳಿಕೊಳ್ಳುತ್ತಾರೆ. ನಾನು ಬಹಳಷ್ಟು ಮಂದಿಗೆ ಹೀಗೆ ಹೇಳುತ್ತೇವೆ. ನಾನು ಹೇಳಿದವರೆಲ್ಲೇ ಮೇಲೆ ಬರುತ್ತಾರೆಯೇ? ಅವರಿಗೆ ಪ್ರತಿಭೆಯಿತ್ತು ಅವರು ಮೇಲೆ ಬಂದರು ಎಂದು ಭಾವನೆ ವ್ಯಕ್ತಪಡಿಸಿದ್ದಾರೆ.
ನಾನು ಮೈಸೂರಿನಲ್ಲಿ ಕೊನೆಯ ಕಾರ್ಯಕ್ರಮ ನೀಡಿದ್ದೇನೆ. ಅವರೂ ಸಹ ಮೈಸೂರಿನಲ್ಲೇ ಕೊನೆಯ ಕಾರ್ಯಕ್ರಮ ನೀಡಿದ್ದು ವಿಪರ್ಯಾಸ. ನಾನು-ಎಸ್’ಪಿಬಿ ಹಲವು ಭಾಷೆಗಳಲ್ಲಿ ಸಾವಿರಾರು ಹಾಡು ಹಾಡಿದ್ದೇವೆ. ನಾವು ಎಂದಿಗೂ ಸ್ನೇಹಿತರಂತೆ ಇದ್ದೆವು, ನಮ್ಮಿಬ್ಬರ ನಡುವೆ ಸ್ಪರ್ಧೆಯಿತ್ತು, ಜಗಳವಾಡುತ್ತಿದ್ದೆವು, ಹಾಡುಗಳಲ್ಲಿ ಆಟವಾಡುತ್ತಿದ್ದೆವು ಎಂದು ನೆನೆದರು.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 27.09.2020 ರಿಂದ 03.10.2020
ಆದರೆ, ಕೊನೆಗೆ ಆಸ್ಪತ್ರೆ ಸೇರಿದರು. ಬರುತ್ತಾರೆ, ಬರುತ್ತಾರೆ ಎಂದು ಕಾಯುತ್ತಿದ್ದೆವು. ಆದರೆ, ಹಾಗೇ ಹೋಗಿ ಬಿಟ್ಟರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಮನೆಯಲ್ಲಿ ಎಲ್ಲರೂ ಚೆನ್ನಾಗಿರಲಿ. ನನಗೆ ಅವರ ಬಗ್ಗೆ ಮಾತನಾಡಿದರೆ ಅಳು ಬರುತ್ತಿದೆ ಎಂದು ಚಿಕ್ಕ ಮಗುವಿನಂತೆ ಅತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post