ಜಕಾರ್ತ: ಜಕಾರ್ತಾದಿಂದ ಪ್ಯಾಂಕಾಲ್ ಪಿನಾಂಗ್ ಗೆ ಹೊರಟಿದ್ದ ಕನಿಷ್ಠ 188 ಮಂದಿ ಪ್ರಯಾಣಿಕರಿದ್ದ ಲಯನ್ ಏರ್ ಫ್ಲೈಟ್ ಟೇಕಾಫ್ ಆದ ಕೇವಲ 13 ನಿಮಿಷಗಳಲ್ಲಿ ನಾಪತ್ತೆಯಾಗಿ ಸಮುದ್ರದಲ್ಲಿ ಪತನಗೊಂಡ ಘಟನೆ ನಡೆದಿದೆ.
Serpihan pesawat Lion Air JT 610 yang jatuh di perairan Karawang. Beberapa kapal tug boad membantu menangani evakuasi. Video diambil petugas tug boad yang ada di perairan Karawang. pic.twitter.com/4GhKcRYkpG
— Sutopo Purwo Nugroho (@Sutopo_PN) October 29, 2018
ಈ ಕುರಿತಂತೆ ಇಂಡೋನೇಷ್ಯಾ ವಾಯುಯಾನ ಪ್ರಾಧಿಕಾರಿದ ಅಧಿಕಾರಿಗಳು ಪ್ರಕಟಣೆ ನೀಡಿದ್ದು, ಜಕಾರ್ತದಿಂದ ಪಾಂಗ್ ಕಲ್ ಪಿನಾಗ್ ದ್ವೀಪಕ್ಕೆ ವಿಮಾನ ಇಂದು ಬೆಳಿಗ್ಗೆ ಹೊರಟಿತ್ತು. ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ವಿಮಾನ ನಾಪತ್ತೆಯಾಗಬೇಕಿತ್ತು. 7.30ರ ವೇಳೆ ದ್ವೀಪದಲ್ಲಿ ವಿಮಾನ ಇಳಿಯಬೇಕಿತ್ತು. ಆದರೆ, ವಿಮಾನ ಜಾವಾ ಸಮುದ್ರದಲ್ಲಿ ಪತನಗೊಂಡಿದೆ ಎಂದಿದ್ದಾರೆ.
ದೂರ ಸಮುದ್ರದಲ್ಲಿರುವ ತೈಲ ಸಂಸ್ಕರಣ ಘಟಕದ ಆಸುಪಾಸಿನಲ್ಲಿ ಸಮುದ್ರದಲ್ಲಿ ನತದೃಷ್ಟ ವಿಮಾನದ ಆಸನಗಳ ಸಹಿತ ವಿವಿಧ ಬಗೆಯ ಅವಶೇಷಗಳು ತೇಲುತ್ತಿರುವುದು ಕಂಡು ಬಂದಿರುವುದಾಗಿ ವರದಿಯಾಗಿದೆ.
Discussion about this post