ಕಲ್ಪ ಮೀಡಿಯಾ ಹೌಸ್ | ಇಸ್ತಾಂಬುಲ್ |
ಕಳೆದ ವಾರ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಬಲಿಯಾದವರ ಸಂಖ್ಯೆ ಒಟ್ಟಾರೆಯಾಗಿ 41 ಸಾವಿರಕ್ಕೆ ಏರಿಕೆಯಾಗಿದೆ.
ಎರಡೂ ದೇಶಗಳಲ್ಲಿ ಸಂಭವಿಸಿದ 7.8ರಷ್ಟು ತೀವ್ರತೆಯ ಕಂಪನ ಅಪಾರ ಪ್ರಮಾಣದ ಪ್ರಾಣ ಹಾಗೂ ಆಸ್ತಿಯನ್ನು ಹಾನಿ ಮಾಡಿದೆ. ಟರ್ಕಿ ಒಂದರಲ್ಲೇ ಸುಮಾರು 35,418 ಮಂದಿ ಸಾವಿಗೀಡಾಗಿದ್ದು, ಸಿರಿಯಾದಲ್ಲಿ 5,714 ಮಂದಿ ಬಲಿಯಾಗಿದ್ದಾರೆ.
ಅವಶೇಷಗಳಡಿಯಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನೂ ನಡೆಸಲಾಗುತ್ತಿದ್ದು, ಇದಕ್ಕಾಗಿ ಸ್ನಿಪ್ಪರ್ ಡಾಗ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಈ ಸ್ಥಳದಲ್ಲಿ ತಾಪಮಾನವು -6 ಡಿಗ್ರಿಗೆ ಕುಸಿತಗೊಂಡಿದ್ದು, ಕಾರ್ಯಾಚರಣೆಯನ್ನು ಕಷ್ಟಕರಗೊಳಿಸಿವೆ.
Also read: ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಎನ್’ಐಎ ದಾಳಿ: ಐಎಸ್’ಐಎಸ್ ಬೆಂಬಲಿಗರಿಗಾಗಿ ಶೋಧ
ಎಷ್ಟು ಆಸ್ತಿಪಾಸ್ತಿ ನಷ್ಟ?
ಉಭಯ ದೇಶಗಳಲ್ಲಿ ಸಂಭವಿಸಿದ ಮಾರಕ ಭೂಕಂಪನದಿಂದ ಬಹಳಷ್ಟು ಊರಿಗೆ ಊರೇ ಸ್ಮಶಾನದಂತಾಗಿದೆ. ಬೃಹತ್ ಕಟ್ಟಡಗಳು ಸಂಪೂರ್ಣ ಧರೆಗುರುಳಿ ಪುಡಿಪುಡಿಯಾಗಿವೆ. ಟರ್ಕಿ ಹಾಗೂ ಸಿರಿಯಾ ಎರಡರಲ್ಲೂ ಸಂಭವಿಸಿದ ಈ ಕಂಪನದಿಂದಾಗಿ ಸುಮಾರು 6.88 ಲಕ್ಷ ಕೋಟಿ ರೂ.ಗಳಷ್ಟು ಆಸ್ತಿ ಪಾಸ್ತಿ ನಷ್ಟಗೊಂಡಿದೆ ಎಂದು ಅಂದಾಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post