ಬಳ್ಳಾರಿ: ಕರ್ನಾಟಕದಲ್ಲಿ ಜೋಡೆತ್ತುಗಳು ಮೂಲೆ ಸೇರುತ್ತವೆ ಎಂದು ನಾನು ಹಿಂದೆಯೇ ಹೇಳಿದ್ದೆ. ಈಗ ಅದು ನಿಜ ಆಗುತ್ತಿದೆ. ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಮನೆ ಸೇರೋದು ಗ್ಯಾರೆಂಟಿ. ರೇವಣ್ಣ ಯಾವುದಾದರೂ ಮಠ ಸೇರುವುದು ಒಳ್ಳೆಯದು ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ರೇವಣ್ಣ ಯಾವುದಾದರೂ ಮಠ ನೋಡಿಕೊಳ್ಳುವುದು ಒಳ್ಳೆಯದು. ನಾನು ಹಿಂದೆ ಹೀಳಿದ್ದ ಹಾಗೆ ರೇವಣ್ಣ ಮಠ ಸೇರುವುದಕ್ಕೆ ಮುಂಚೆ ಕುಮಾರಸ್ವಾಮಿಯನ್ನೂ ಕರೆದುಕೊಂಡು ಹೋಗಲಿ. ಇಲ್ಲದೆ ಹೋದರೆ ಕುಮಾರಸ್ವಾಮಿ ಡಿಪ್ರೆಶನ್’ಗೆ ಹೋಗುತ್ತಾರೆ. ಈಗಾಗಲೇ ಅವರು ಡಿಪ್ರೆಶನ್’ನಲ್ಲಿದ್ದಾರೆ ಎಂದು ಕಟಕಿಯಾಡಿದ್ದಾರೆ.
ಕುಮಾರಸ್ವಾಮಿ ಸಹವಾಸವೇ ಬೇಡ ಎಂದು ಡಿ.ಕೆ. ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ದಾರೆ. ಹೋಗುವುದಕ್ಕೆ ಮುಂಚೆ ಜೆಡಿಎಸ್ ಸಹವಾಸ ಸಾಕು ಈ ಸರ್ಕಾರ ಬೀಳಿಸಿ ನಾನು ಬರೋದರೊಳಗೆ ಅಂತ ತಮ್ಮ ಆಪ್ತ ಶಾಸಕರುಗಳಿಗೆ ಹೇಳಿ ಹೋಗಿದ್ದಾರೆ. ಹಾಗಾಗಿ ಈಗಾಗಲೇ ಕಾಂಗ್ರೆಸ್ ಶಾಸಕರೇ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಬೈತಿದ್ದಾರೆ. ಕುಮಾರಸ್ವಾಮಿ ತೆಪ್ಪಗೆ ರಾಜೀನಾಮೆ ಕೊಡಲು ಸಜ್ಜಾಗಲಿ ಎಂದಿದ್ದಾರೆ.
Discussion about this post