ಚೆನ್ನೈ: ದೇಶದ ಪ್ರತಿಷ್ಠಿತ ಶರವಣ ಭವನ್ ಸೇರಿದಂತೆ ಅಂಜಪರ್ ಸಂಸ್ಥೆಗಳ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ಶರವಣ ಭವನ್ ಮಾತ್ರವಲ್ಲದೇ, ಅಂಜಪರ್ ಗ್ರೂಪ್, ಗ್ರಾಂಡ್ ಸ್ವೀಟ್ಸ್, ಹಾಟ್ ಬ್ರೆಡ್ಸ್ ಗಳ ಮೇಲೆ ಐಟಿ ದಾಳಿ ನಡೆದಿದೆ.
ಚೆನ್ನೈನಲ್ಲಿ ಒಟ್ಟು 32 ಕಡೆಗಳಲ್ಲಿ ದಾಳೀ ನಡೆಸಲಾಗಿದ್ದು, ತೆರಿಗೆ ವಂಚನೆ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ದಕ್ಷಿಣ ಭಾರತ ಮೂಲದ ಶರವಣ ಭವನ್ ದೇಶದಲ್ಲಿ ಅತ್ಯಂತ ಪ್ರಸಿದ್ದ ಹೊಟೇಲ್ ಆಗಿದ್ದು, ಚೆನ್ನೈನಲ್ಲಿ 20 ಶಾಖೆ ಸೇರಿದಂತೆ ದೇಶದಾದ್ಯಂತ 32 ಶಾಖೆಗಳಲ್ಲದೇ ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ, ಮಧ್ಯ ಪ್ರಾಚ್ಯ, ಆಫ್ರಿಕಾ, ಯುರೋಪ್ ಹಾಗೂ ಉತ್ತರ ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ಒಟ್ಟು 47 ಶಾಖೆಗಳನ್ನು ಹೊಂದಿದೆ.

















