ಬೆಂಗಳೂರು: ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯ ನಟ ಹಾಗೂ ನಿರ್ಮಾಪಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಡೆಸಿರುವ ದಾಳಿ ಇಂದೂ ಸಹ ಮುಂದುವರೆದಿದ್ದು, ಲೆಕ್ಕಪತ್ರಗಳ ಪರಿಶೀಲನೆ ನಡೆದಿದೆ.
ಎಂಟು ವ್ಯಕ್ತಿಗಳ ಪೈಕಿ ನಟ ಯಶ್ ಹಾಗೂ ಸ್ಟಾರ್ ನಿರ್ಮಾಪಕ ರಾಕ್’ಲೈನ್ ವೆಂಕಟೇಶ್ ಅವರ ಮನೆಯಲ್ಲಿ ಇಂದೂ ಸಹ ದಾಖಲೆಗಳ ಪರಿಶೀಲನೆ ಮುಂದುವರೆದಿದ್ದರೆ, ನಿರ್ಮಾಪಕ ವಿಜಯ್ ಕಿರಗಂದೂರ್, ಪುನೀತ್ ಮನೆಯಲ್ಲಿ ಶೋಧ ಮುಕ್ತಾಯವಾಗಿದೆ ಪುನೀತ್ ರಾಜ್’ಕುಮಾರ್ ಮನೆಯಲ್ಲಿನ ಶೋಧ ಕಾರ್ಯ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯಗೊಂಡಿದೆ.
ಗುರುವಾರ ನಟ ಪುನೀತ್ ರಾಜಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ನಿವಾಸಕ್ಕೆ ಆಡಿಟರ್ಸ್ ಗಳನ್ನು ಕರೆಸಿಕೊಂಡಿದ್ದರು. ಪುನೀತ್ ರಾಜ್’ಕುಮಾರ್ ಕುಟುಂಬದ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತಿರುವ ಇಬ್ಬರು ಆಡಿಟರ್ಸ್ ನಿವಾಸಕ್ಕೆ ಆಗಮಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಜಂಟಿ ಆಯುಕ್ತ ರಮೇಶ್ ಅವರೇ ಖುದ್ದು, ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ.
Discussion about this post