ಕಲ್ಪ ಮೀಡಿಯಾ ಹೌಸ್ | ಐಜ್ವಾಲ್ |
ಅದು ವಿಭಿನ್ನ ಹಾಗೂ ವಿಶಿಷ್ಠ ಪ್ರಾಕೃತಿಕ ಸಂಪತ್ತು ಮತ್ತು ವಿಪತ್ತುಗಳನ್ನು ಸಮ್ಮಿಶ್ರ ಮಾಡಿಕೊಂಡು, ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದ ಪ್ರದೇಶ. ಅದೇ ಈಶಾನ್ಯ ಪ್ರದೇಶದ ಮಿಜೋರಾಂನ ಐಜ್ವಾಲ್. #Izwal of Mizoram ಇಂತಹ ಒಂದು ಪ್ರದೇಶದಲ್ಲಿ ನಮ್ಮ ರೈಲ್ವೇ ಇಂಜಿನಿಯರುಗಳು #Railway Engineers ಅದ್ಭುತವೊಂದನ್ನೇ ಸೃಷ್ಠಿ ಮಾಡಿದ್ದಾರೆ.
ಒಂದಕ್ಕೊಂದು ಒತ್ತಿಕೊಂಡಿರುವ ಗುಡ್ಡಗಾಡುಗಳು, ಆಳವಾದ ಕಣಿವೆಗಳನ್ನು ಹೊಂದಿರುವ ಪ್ರದೇಶ. ಪ್ರಮುಖವಾಗಿ, ನಮ್ಮ ದೇಶದ ಮಿಜೋರಾಂ, ಅಸ್ಸಾಂ, #Assam ಮಣಿಪುರ, #Manipura ತ್ರಿಪುರ #Tripura ರಾಜ್ಯಗಳ ಜೊತೆ ಅಲ್ಲದೆ, ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದೊಂದಿಗೂ ಸಹ ಗಡಿಯನ್ನು ಹಂಚಿಕೊಂಡಿರುವ ಪ್ರದೇಶ. ಹೀಗಿದ್ದರೂ ಇಲ್ಲಿ ಸಾರಿಗೆ ಅಷ್ಟು ಸುಗಮವಲ್ಲ. ಸದ್ಯ ಎಲ್ಲಾ ರೀತಿಯ ಅಗತ್ಯಗಳನ್ನು ರಸ್ತೆ ಮೂಲಕವೇ ಪೂರೈಸಲಾಗುತ್ತಿದೆ.

ಮಿಜೋರಾಂ ರಾಜಧಾನಿ ಐಜ್ವಾಲ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಸೈರಾಂಗ್‌ನಲ್ಲಿ ಮುಕ್ತಾಯಗೊಳ್ಳುವ ಹೊಸ ಮಾರ್ಗವು ರಾಜ್ಯ ರಾಜಧಾನಿಯನ್ನು ಇತರ ಈಶಾನ್ಯ ರಾಜ್ಯಗಳೊಂದಿಗೆ ಮತ್ತು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಇಲ್ಲಿಯವರೆಗೆ ಮಿಜೋರಾಂಗೆ ರಸ್ತೆ ಮತ್ತು ವಾಯು ಸಂಪರ್ಕವಿದ್ದರೂ, ಹೊಸ ಮಾರ್ಗದ ಮೂಲಕ ಮತ್ತೊಂದು ಸಾರಿಗೆ ಸಂಪರ್ಕ ಸಾಧ್ಯವಾಗುತ್ತಿದೆ.
ಸೈರಾಂಗ್-ಬೈರಾಬಿ ಮಾರ್ಗವು ಭೋದಪುರ ಜಂಕ್ಷನ್ ಮೂಲಕ ಅಸ್ಸಾಂನ ಸಿಲ್ಚಾರ್ ಅನ್ನು ಸಂಪರ್ಕಿಸುತ್ತದೆ. ಈ ಸಂಪರ್ಕದಿಂದಾಗಿ ಅಸ್ಸಾಂ, ತ್ರಿಪುರ ಮತ್ತು ಅರುಣಾಚಲ ಪ್ರದೇಶದೊಂದಿಗೆ ಸಂಪರ್ಕ ಸಾಧ್ಯವಾಗುತ್ತದೆ.
- ಈ ಹೊಸ ಮಾರ್ಗವು ಒಟ್ಟು 12.85 ಕಿಮೀ ಉದ್ದದ 48 ಸುರಂಗಗಳನ್ನು ಒಳಗೊಂಡಿದೆ. 55 ಪ್ರಮುಖ ಸೇತುವೆಗಳು, 87 ಸಣ್ಣ ಸೇತುವೆಗಳು
- ಐದು ರಸ್ತೆ ಓವರ್ ಸೇತುವೆಗಳು ಮತ್ತು ಆರು ರಸ್ತೆ ಕೆಳ ಸೇತುವೆಗಳು
- ಈ ನೂತನ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸೆಪ್ಟೆಂಬರ್ 13ರಂದು ಉದ್ಘಾಟನೆ
- ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು ನವೆಂಬರ್ 29, 2014 ರಂದು ಈ ಯೋಜನೆಗೆ ವಾಸ್ತವಿಕವಾಗಿ ಅಡಿಪಾಯ ಹಾಕಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post