ಕಲ್ಪ ಮೀಡಿಯಾ ಹೌಸ್ | ಜೈಪುರ |
ರಾಜಸ್ಥಾನದ ಬೀವರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆಯಾಗಿ #Toxic Gas Leak ಮೂವರು ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಬಡಿಯಾದ ವಸತಿ ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ತಡರಾತ್ರಿ ನೈಟ್ರಿಕ್ ಆಮ್ಲ ಸೋರಿಕೆಯಾಗಿ ಕಾರ್ಖಾನೆ ಮಾಲೀಕ ಮತ್ತು ಇತರ ಇಬ್ಬರು ಸಾವನ್ನಪ್ಪಿದ್ದು, 53 ಜನ ಅಸ್ವಸ್ಥರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹೇಂದ್ರ ಖಡ್ಗಾವತ್ ತಿಳಿಸಿದ್ದಾರೆ.
Also read: ಕರ್ನಾಟಕ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಘಟಕ ಅಸ್ತಿತ್ವಕ್ಕೆ
ವಿಷಕಾರಿ ಅನಿಲ ಉಸಿರಾಡಿದ ನಂತರ ಸುತ್ತಮುತ್ತಲಿನ ಹಲವಾರು ಜನ ಅಸ್ವಸ್ಥರಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಕಾರ್ಖಾನೆ ಮಾಲೀಕ ಸುನಿಲ್ ಸಿಂಘಾಲ್(47) ಸೋಮವಾರ ರಾತ್ರಿ ನಿಧನರಾದರು, ಸ್ಥಳೀಯ ನಿವಾಸಿಗಳಾದ ದಯಾರಾಮ್ (52) ಮತ್ತು ನರೇಂದ್ರ ಸೋಲಂಕಿ (40) ಅವರು ಮಂಗಳವಾರ ನಿಧನರಾದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ.
ಅಜ್ಮೀರ್‌ನ ಜೆಎಲ್‌ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ. ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post