ಕಲ್ಪ ಮೀಡಿಯಾ ಹೌಸ್ | ಜಜ್ಪುರ |
ಶಾಲಾ ಸಮಯದಲ್ಲಿ ಆಟವಾಡುತ್ತಿದ್ದ ಎಂಬ ಕಾರಣಕ್ಕಾಗಿ ನಾಲ್ಕನೆಯ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕನೊಬ್ಬ ಬಿಸಿಲಿನಲ್ಲಿ ಕೂರಿಸಿದ್ದು, ಇದರಿಂದ ಅಸ್ವಸ್ಥಗೊಂಡ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಒಡಿಶಾದ ಜಜ್ಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದ್ದು, ಮೃತ ಬಾಲಕನನ್ನು ರುದ್ರ ನಾರಾಯಣ ಸೇಥಿ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿ ಮಧ್ಯಾಹ್ನದ ತರಗತಿ ಸಮಯದಲ್ಲಿ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ. ಇದನ್ನು ಕಂಡ ಶಿಕ್ಷಕನೊಬ್ಬ ಬಾಲಕನಿಗೆ ಬಿಸಿಲಿನಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ್ದಾನೆ.
Also read: ಬೆಂಗಳೂರಿನಲ್ಲಿ ಮೊಟ್ಟ ಮೊದಲ ಕಂಬಳಕ್ಕೆ ಕೌಂಟ್ ಡೌನ್: ಎಷ್ಟು ಕೋಣಗಳು ಪಾಲ್ಗೊಳ್ಳಲಿವೆ?
ಬಿಸಿಲಿನಲ್ಲಿ ಕುಳಿತ ಬಾಲಕ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದಾನೆ. ತತಕ್ಷಣವೇ ಬಾಲಕನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದನು ಎಂದು ವರದಿಯಾಗಿದೆ.
ಶಿಕ್ಷೆ ನೀಡಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದ್ದರೂ, ಈ ಕುರಿತಂತೆ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ ಎಂದು ಮಾಹಿತಿ ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post