ಕಲ್ಪ ಮೀಡಿಯಾ ಹೌಸ್ | ಜಾಮ್’ನಗರ(ಗುಜರಾತ್) |
ರಾತ್ರಿ ಕಾರ್ಯಾಚರಣೆಯಲ್ಲಿದ್ದ ಜಾಗ್ವಾರ್ ಯುದ್ದ ವಿಮಾನ ಪತನಗೊಂಡಿದ್ದು, #Jaguar Fighter Jet Crash ಓರ್ವ ಪೈಲಟ್ ಹುತಾತ್ಮರಾಗಿರುವ ಘಟನೆ ಗುಜರಾತ್’ನ ಜಾಮ್ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಭಾರತೀಯ ವಾಯುಪಡೆಯ #Airforce ಎರಡು ಆಸನಗಳ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ಭಾರತೀಯ ವಾಯುಪಡೆಯ ಪೈಲಟ್ ಮೃತಪಟ್ಟಿದ್ದಾರೆ. ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
Also read: ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರ | ಆಕ್ಷೇಪಿಸಿ ಸುಪ್ರೀಂ ಮೊರೆ | ತಮಿಳುನಾಡು ಸಿಎಂ ಸ್ಟಾಲಿನ್
ಪತನಗೊಂಡ ವಿಮಾನದಿಂದ ಒಬ್ಬ ಪೈಲಟ್ ರಕ್ಷಿಸಲಾಗಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದರು. ರಕ್ಷಿಸಿದ ಪೈಲಟ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಜಾಮ್ ನಗರದಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿರುವ ಸುವಡಾರ್ ಗ್ರಾಮದಲ್ಲಿ ತೆರೆದ ಮೈದಾನದಲ್ಲಿ ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಪತನದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post