ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನಿನ್ನೆ ರಾತ್ರಿಯಿಂದ ರದ್ದಾಗಿದ್ದು, ಇಂದಿನಿಂದ ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿದೆ.
ಸಂವಿಧಾನಕ್ಕೆ ಸೇರಿಸಲಾಗಿದ್ದ 370ನೆಯ ವಿಧಿಯನ್ನು ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ತೆಗೆದು ಹಾಕಿತ್ತು. ಅದಾದ ನಂತರ ನಿನ್ನೆ ರಾತ್ರಿಯಿಂದ ಅಧಿಕೃತವಾಗಿ ರದ್ದಾಗಿದ್ದು, ಇನ್ನು ಮುಂದೆ ಆಡಳಿತಾತ್ಮಕವಾಗಿ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳನ್ನು ಲೆಫ್ಟಿನೆಂಟ್ ಗವರ್ನರ್ ಗಳಾದ ಜಿ.ಸಿ. ಮುರ್ಮು ಮತ್ತು ಆರ್.ಕೆ. ಮಾಥುರ್ ನೋಡಿಕೊಳ್ಳಲಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತದ ರಾಜ್ಯಗಳ ಸಂಖ್ಯೆ ಇನ್ನು ಮುಂದೆ 28 ಆಗಿರಲಿದ್ದು, 9 ಕೇಂದ್ರಾಡಳಿತ ಪ್ರದೇಶಗಳಿರಲಿವೆ.
Discussion about this post