ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀನಗರ: ಜಮ್ಮು ಕಾಶ್ಮೀರದ ಎಲ್’ಒಸಿ ಬಳಿಯಲ್ಲಿ ಪದೇ ಪದೇ ಕಾಲು ಕೆರೆದು ಪ್ರಚೋದನೆ ನೀಡುತ್ತಿರುವ ಪಾಕ್ ಸೈನಿಕರ ಮೇಲೆ ಭಾರತೀಯ ಯೋಧರು ಅಬ್ಬರಿಸಿದ್ದು, ಶತ್ರುಗಳು ಅಕ್ಷರಶಃ ದಿಕ್ಕಾಪಾಲಾಗಿ ಓಡಿದ್ದಾರೆ.
ಉಗ್ರರನ್ನು ಮುಂದೆ ಬಿಟ್ಟು ಭಾರತೀಯ ಯೋಧರ ಮೇಲೆ ಪದೇ ಪದೇ ದಾಳಿ ನಡೆಸಲು ಮುಂದಾಗುತ್ತಿದ್ದ ಪಾಕಿಗಳ ಮೇಲೆ ಈ ಬಾರಿ ದೊಡ್ಡ ಮಟ್ಟದಲ್ಲಿ ಪ್ರತ್ಯುತ್ತರ ನೀಡಿದ ನಮ್ಮ ಸೈನಿಕರ ಅಬ್ಬರಕ್ಕೆ ಪಾಕ್ ಸೈನಿಕರು ಲಾಂಚ್ ಪ್ಯಾಡ್ ಬಿಟ್ಟು ಓಡಿ ಹೋಗಿದ್ದಾರೆ.
ಉಗ್ರರ ಹಿಂಬದಿಯಲ್ಲಿ ನಿಂತು ಪಾಕಿಸ್ಥಾನ ಸೇನಾ ಪಡೆಗಳು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗಡಿಯಲ್ಲಿ ಗುಂಡಿನ ದಾಳಿ ನಡೆಸಿತ್ತು.











Discussion about this post