ಕಲ್ಪ ಮೀಡಿಯಾ ಹೌಸ್ | ಜಾರ್ಖಂಡ್ |
ಇಲ್ಲಿನ ಗೋಯಿಲ್ಕೆರಾ ಬಳಿಯ ರೈಲ್ವೆ ಹಳಿಗಳನ್ನು ಸ್ಪೋಟಿಸಿರುವ ನಕ್ಸಲರು, ಇನ್ನೊಂದೆಡೆ ಬಸ್’ಗಳನ್ನೂ ಸಹ ಸುಟ್ಟು ಹಾಕಿ, ಆತಂಕ ಸೃಷ್ಠಿಸುವ ಪ್ರಯತ್ನ ಮಾಡಿದ್ದಾರೆ.
ಮನೋಹರಪುರ ಮತ್ತು ಗೋಯಿಲ್ಕೆರಾ ನಡುವಿನ ರೈಲ್ವೆ ಹಳಿಯನ್ನು ನಕ್ಸಲರು ಸ್ಪೋಟಿಸಿದ್ದು, ಪರಿಣಾಮವಾಗಿ ಈ ಮಾರ್ಗದ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಇನ್ನೊಂದು ಘಟನೆಯಲ್ಲಿ ಛತ್ತೀಸ್’ಗಡದ ಬಿಜಾಪುರದಲ್ಲಿ ಬಸ್ ತಡೆದ ನಕ್ಸಲರು ಜನರನ್ನು ಕೆಳಕ್ಕೆ ಇಳಿಸಿ, ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿ, ಬಸ್’ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯಲ್ಲೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
Also read: 146 ಸಂಸದರ ಅಮಾನತು | ಖರ್ಗೆ ನೇತೃತ್ವದಲ್ಲಿ ಇಂಡಿ ಒಕ್ಕೂಟದ ಧರಣಿ
ಹಳಿ ಸ್ಪೋಟಗೊಂಡ ಹಾಗೂ ಬಸ್ ಹೊತ್ತಿ ಉರಿದ ಎರಡೂ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post