ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ #RSS ಮಹತ್ವದ ಗೆಲುವು ದೊರೆತಿದ್ದು, ಚಿತ್ತಾಪುರದಲ್ಲಿ ನ.16ರಂದು ಷರತ್ತುಬದ್ದವಾಗಿ ಪಥ ಸಂಚಲನಕ್ಕೆ ಅನುಮತಿ ದೊರೆತಿದೆ.
ಹೌದು… ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ನಿಷೇಧ ಹೇರಿ, ಆರ್’ಎಸ್’ಎಸ್ ವಿರುದ್ದ ಸಮರ ಸಾರಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ #PriyankKharge ಮುಖಭಂಗವಾಗಿದೆ.
ಪಥಸಂಚಲನ ನಿಷೇಧ ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿ, ಅನುಮತಿ ಕೋರಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪಥಸಂಚಲನಕ್ಕೆ ಷರತ್ತುಬದ್ದ ಅನುಮತಿಯನ್ನು ನ್ಯಾಯಾಲಯ ನೀಡಿದೆ.
ಇದಕ್ಕೆ ಆರ್’ಎಸ್’ಎಸ್ ಪರ ವಕೀಲ ಅರುಣ್ ಶ್ಯಾಂ ಆಕ್ಷೇಪ ವ್ಯಕ್ತಪಡಿಸಿದರು. ಇದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ 100ನೇ ವರ್ಷದ ಆಚರಣೆ, ಸ್ಥಳೀಯರ ಭಾವನೆ ಇದರೊಂದಿಗೆ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಾಲ್ಗೊಳ್ಳಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಿದರು. ಬಳಿಕ 350 ಜನಕ್ಕೆ ನ್ಯಾಯಾಲಯ ಅವಕಾಶ ನೀಡಿದೆ.
ಏನೆಲ್ಲಾ ಷರತ್ತುಗಳು?
- ನವೆಂಬರ್ 16ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ
- ಅಂದು ಮಧ್ಯಾಹ್ನ 3:30 ರಿಂದ ಸಂಜೆ 5:45ರವರೆಗೆ ಪಥ ಸಂಚಲನಕ್ಕೆ ಅವಕಾಶ
- 350 ಗಣವೇಷಧಾರಿಗಳು ಮಾತ್ರ ಪಾಲ್ಗೊಳ್ಳಲು ಅವಕಾಶ
- 50 ಜನ ಬ್ಯಾಂಡ್ ಸಮೇತ ಭಾಗವಹಿಸಬಹುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post