ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಎಂಬ ಮಾತೊಂದಿದೆಯಲ್ಲಾ.. ಅದು ಶೇ.100ರಷ್ಟು ಕಾಂಗ್ರೆಸ್‌ಗೆ ಅನ್ವಯವಾಗುತ್ತದೆ ಎನ್ನುವುದು ಸತ್ಯ.
ದೇಶದಲ್ಲಿ ಬುದ್ದಿಜೀವಿಗಳ, ಎಡಪಂಥೀಯ ಸಾಹಿತಿಗಳ ಹತ್ಯೆಗಳಾದ ದೇಶದಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ಅಸಹಿಷ್ಣುತೆ(intolerance) ತಾಂಡವವಾಡುತ್ತದೆ ಎಂದು ಬೊಬ್ಬಿರಿದು, ಪ್ರಶಸ್ತಿಗಳನ್ನು ಹಿಂತಿರುಗಿಸಿದ ಸಾಹಿತಿಗಳೆಷ್ಟು, ಜಸ್‌ಟ್ ಆಸ್ಕಿಂಗ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿ(ಜನರಿಂದ ಮುಖಕ್ಕೆ ಮಂಗಳಾರ ಮಾಡಿಸಿಕೊಂಡಿದ್ದು ಬೇರೆಯದೇ ವಿಚಾರ) ವ್ಯಕ್ತಿಗಳೆಷ್ಟು…
ಆದರೆ.. ಈಗ.. ಈಗ.. ಈಗ.. ಇವರೆಲ್ಲಾ ಬೆಂಬಲಿಸಿದ ಕಾಂಗ್ರೆಸ್ ಪಕ್ಷದಲ್ಲೇ ಅಸಹಿಷ್ಣುತೆ ಅಂದರೆ intolerance ತಾಂಡವವಾಡುತ್ತಿದೆಯೆಲ್ಲಾ. ಈಗ ಅವರೆಲ್ಲಾ ಎಲ್ಲಿ ಹೋಗಿದ್ದಾರೆ. ಯಾವ ವಿಚಾರ ಎಂದಿರಾ… ಇನ್ನಾರದ್ದೂ ಅಲ್ಲ, ಹಿರಿಯ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ವಿಚಾರ.
ಹೌದು…ಕಾಂಗ್ರೆಸ್‌ನಿಂದ ಅಸಹಿಷ್ಣುತೆಯ ದೌರ್ಜನ್ಯಕ್ಕೆ ಈಗ ಒಳಗಾಗಿರುವವರು ಇವರೇ…
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರನೆಯ ಸಂಘ ಶಿಕ್ಷಾ ವರ್ಗ ವಿದಾಯದ ಮುಖ್ಯ ಅತಿಥಿಯಾಗಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆಹ್ವಾನಿತರಾಗಿದ್ದು, ಜೂನ್ 7ರ ನಾಳೆ ವರ್ಗವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ವಿಚಾರ ಹೊರಬಿದ್ದ ನಂತರ ಆರ್‌ಎಸ್‌ಎಸ್ ಅನ್ನು ಖಂಡಾತುಂಡವಾಗಿ ವಿರೋಧಿಸುವ ಕಾಂಗ್ರೆಸ್ ಪ್ರಣವ್ ಮುಖರ್ಜಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಆಂತರಿಕ ಒತ್ತಡ ಹೇರಲು ಆರಂಭಿಸಿತು. ನೂರಾರು ಫೋನ್ ಕರೆಗಳು, ಈ ಮೇಲ್‌ಗಳ ಮೂಲಕ ಒತ್ತಡ ಹೇರಿದ ಕಾಂಗ್ರೆಸ್ ಪ್ರಣವ್ ಅವರನ್ನು ಮಾನಸಿಕವಾಗಿ ಹಿಂಸಿಸಿದೆ ಎಂದರೆ ತಪ್ಪಲ್ಲ. ಎಲ್ಲಿಯವರೆಗೂ ಈ ಹಿಂಸೆ? ಅಂತರ ರಾಷ್ಟ್ರೀಯ ಮಾಧ್ಯಮಗಳೂ ಸಹ ಸುದ್ದಿ ಮಾಡುವವರೆಗೂ… ನಿಜಕ್ಕೂ ಹೇಸಿಗೆ ಅಲ್ಲವೇ?
ಅರೆ ಸ್ವಾಮಿ ಕಾಂಗ್ರೆಸ್ಸಿಗರೇ, ಪ್ರಣವ್ ಮುಖರ್ಜಿ ಅವರೇನು ನಿಮ್ಮ ಪಕ್ಷದ ಗುಲಾಮರೇ ಅಥವಾ ನಿಮ್ಮಲ್ಲಿ ಜೀತಕ್ಕಿದ್ದಾರೆಯೇ?
ಪ್ರಣವ್ ಮುಖರ್ಜಿ ಅವರು ಹಿರಿಯ, ಅನುಭವಿ ರಾಜಕಾರಣಿ, ದಶಕಗಳ ಕಾಲ ತಮ್ಮನ್ನು ಸಾರ್ವಜನಿಕ ಜೀವನದಲ್ಲೇ ತೊಡಗಿಸಿಕೊಂಡವರು. ಇಂತಹ ನಾಯಕರೊಬ್ಬರು ತಮ್ಮದೇ ಆದ ಚಿಂತನೆಗಳನ್ನು ಹೊಂದಿರುತ್ತಾರೆ. ಈ ರೀತಿಯ ಅನುಭವಿ ನಾಯಕರ ಮಾತುಗಳನ್ನು ಕೇಳುವ ಅವಕಾಶ ಎಲ್ಲೇ ದೊರೆತರೂ ಅದು ದೇಶದ ಪುಣ್ಯ.. ಅಲ್ಲದೇ, ಈ ದೇಶದ ಪ್ರಜೆಯೊಬ್ಬರು ತಮಗೆ ಬೇಕಾದ ರೀತಿಯ ಆಯ್ಕೆಗಳನ್ನು ಮಾಡಿಕೊಳ್ಳಲು ಸಂವಿಧಾನ ಅವಕಾಶವನ್ನೂ ಸಹ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪಕ್ಷಕ್ಕೆ ಸೈದ್ದಾಂತಿಕ ವ್ಯತ್ಯಾಸವಿದೆ ಎಂಬ ಕಾರಣಕ್ಕಾಗಿ ಹಿರಿಯ ನಾಯಕರೊಬ್ಬರಿಗೆ ಈ ರೀತಿ ಹಿಂಸೆಗೆ ಗುರಿ ಮಾಡುವುದು ನಿಮ್ಮ ನೀಚತನಕ್ಕೆ ಸಾಕ್ಷಿಯಾಗುತ್ತದೆ.
ಹಿರಿಯ ನಾಯಕರೊಬ್ಬರ ನಿರ್ಧಾರವನ್ನು ಈ ರೀತಿ ವಿರೋಧಿಸುತ್ತಿರುವುದು ಆಶ್ಚರ್ಯವೇ ಆದರೂ, ಹಿಂಸಾತ್ಮಕ ಹಿಡನ್ ಅಜೆಂಡಾ ಹೊಂದಿರುವ ಕಮ್ಯುನಿಸಂನ್ನು ಹಾಸಿ ಹೊದ್ದುಕೊಂಡಿರುವ ಕಾಂಗ್ರೆಸ್‌ನಿಂದ ಇಂತಹ ಅಸಹಿಷ್ಣುತೆಯೇನೂ ಅನಿರೀಕ್ಷಿತವಲ್ಲ.
ವಾಸ್ತವವಾಗಿ, ಹಿಂಸೆಯನ್ನೇ ಹಿಡನ್ ಆಗಿ ಪ್ರತಿಪಾದಿಸುವ ಎಡಪಂಥೀಯವಾದದ ಮುಖವಾಡವಾಗಿರುವ ಕಾಂಗ್ರೆಸ್ ಹಾಗೂ ಪಟಾಲಂನ ಸಿದ್ದಾಂತವೇ ಹಾಗೆ… ತಮಗೆ ಬೇಡ, ತಮ್ಮ ಸಿದ್ದಾಂತಕ್ಕೆ ವಿರೋಧ ಎಂದರೆ ಸಾಕು. ಅವರನ್ನು ನಿರಂತರವಾಗಿ, ಬಹಿರಂಗವಾಗಿ ಟೀಕಿಸಿ, ಕಾಡಿ, ಮಾನಸಿಕ ಹಿಂಸೆಗೆ ಗುರಿಮಾಡಿ, ನಿರ್ಧಾರ ಬದಲಿಸುವಂತೆ ಮಾಡುವುದು ಇವರ ತಂತ್ರಗಳಲ್ಲಿ ಒಂದು.. ಎಡಪಂಥೀಯವಾದವೂ ಸಹ ವಿಶ್ವದಾದ್ಯಂತ ಇಂತಹ ಕೃತ್ಯವನ್ನೇ ಮಾಡಿಕೊಂಡು ಬಂದಿದೆ.
ಸುಮ್ಮನೆ ಹಿಂದಿನ ದಿನಗಳನ್ನು ನೋಡಿದರೆ, ವಿಭಿನ್ನ ಸಿದ್ದಾಂತಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಮಾಡಲಾಗಿದೆ.
ಹಿಂದೆ, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಅಭಯ್ ಬ್ಯಾಂಗ್ ಅವರೂ ಸಹ ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂದಾದಾಗ ಇಂತಹುದ್ದೇ ಅಸಹಿಷ್ಣುತೆಯನ್ನು ಅವರ ಮೇಲೆ ಹೇರಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಸಾಮಾಜಿಕ ಹಾಗೂ ರಾಷ್ಟ್ರೀಯ ಸಮಸ್ಯೆಗಳ ವಿಚಾರದಲ್ಲಿ ಆರ್‌ಎಸ್‌ಎಸ್ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಂಘ ಪರಿವಾರದ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅಂದೂ ಸಹ ಎಡಪಂಥೀಯರು ಖಂಡಾತುಂಡವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇಂತಹ ಸಾಕಷ್ಟು ಉದಾಹರಣೆಗಳಿವೆ.
ಇಲ್ಲಕ್ಕೂ ಮಿಗಿಲಾಗಿ, ಪ್ರಣವ್ ಮುಖರ್ಜಿ ಈ ದೇಶದ ಪ್ರಜೆ, ಮುತ್ಸದ್ದಿ ರಾಜಕಾರಣಿ, ನಮ್ಮ ದೇಶದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ತಮ್ಮ ಅಧಿಕಾರವಧಿಯಲ್ಲಿ ಎಲ್ಲೂ, ಎಂದೂ ಈ ದೇಶದ ಪ್ರಥಮ ಪ್ರಜೆಯ ಸ್ಥಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡವರು.
ಇನ್ನು, ಸಂವಿಧಾನ ಈ ದೇಶದ ಪ್ರತಿ ಪ್ರಜೆಗೂ ತನ್ನದೇ ಆದ ಆಯ್ಕೆಯ, ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಅದರಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು, ತಮಗೆ ಬೇಕಾದಂತೆ ನಿರ್ಧಾರ ಕೈಗೊಳ್ಳಲು ಎಲ್ಲರಂತೆ ಪ್ರಣವ್ ದಾ ಸಹ ಸ್ವತಂತ್ರ್ಯರು.. ಇದರಲ್ಲಿ ತಪ್ಪೇನಿದೆ?
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವೆಂಬ ಅಹಃ ನಿಂದ ಮಾತನಾಡುವ ಕಾಂಗ್ರೆಸ್‌ನ ಚಾರಿತ್ರ್ಯವನ್ನು ಒಮ್ಮೆ ನೋಡಿದರೆ, ಇಂತಹುದ್ದೇ ದುರಂಹಂಕಾರ, ದಬ್ಬಾಳಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಗಳ ಉದಾಹರಣೆಗಳು ಸಾಲು ಸಾಲಿವೆ.
ಆದರೆ, ಪ್ರಣವ್ ಮುಖರ್ಜಿಯಂತಹ ಮುತ್ಸದ್ದಿ ರಾಜಕಾರಣಿಯನ್ನೂ ಇವರು ಬಿಡುವುದಿಲ್ಲ ಎಂದರೆ… ಇವರದ್ದು ಸೈದ್ದಾಂತಿಕ ವಿರೋಧದ ಜೊತೆಯಲ್ಲಿ, ವೈಯಕ್ತಿಕ ದ್ವೇಷಗಳೂ ಸಹ ಆವರಿಸಿಕೊಂಡಿವೆ ಎಂದು ಪರಿಗಣಿಸುವುದು ಸೂಕ್ತ…
ಇಷ್ಟೆಲ್ಲಾ ಆದರೂ, ಪ್ರಣವ್ ದಾ ಮಾತ್ರ ತಮ್ಮ ನಿರ್ಧಾರ ಬದಲಾವಣೆ ಮಾಡದರೆ ಸಂಘ ಪರಿವಾರದ ಕಾರ್ಯಕ್ರಮದಲ್ಲಿ ನಾಳೆ ಪಾಲ್ಗೊಳ್ಳುವುದು ಉತ್ತಮ ಬೆಳವಣಿಗೆ ಎನ್ನಲಡ್ಡಿಯಿಲ್ಲ
Discussion about this post