ಕಲ್ಪ ಮೀಡಿಯಾ ಹೌಸ್ | ಲೇಖನ: ಭಾನುಪ್ರಕಾಶ್ ಎಸ್. ಆಚಾರ್ಯ |
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಯಾವಾಗ ಧರ್ಮದ ಅವನತಿಯಾಗುವ ಸೂಚನೆ ದೊರೆಯುವುದೋ, ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ ಅಂತ ಭಗವಾನ್ ಶ್ರೀಕೃಷ್ಣ ಹೇಳಿದ್ದಾನೆ.
Also Read>> ಬೆಂಗಳೂರು ವಿವಿ ಮರುನಾಮಕರಣ ಓಕೆ-ವಿವಿಗಳ ಪುನರ್ ವಿಲೀನದ ಬಗ್ಗೆ ಸ್ಪಷ್ಠತೆ ನೀಡಿಲ್ಲ ಏಕೆ?
ಧರ್ಮೋ ರಕ್ಷತಿ ರಕ್ಷಿತಃ-ಸನಾತನ ಹಿಂದೂ ಧರ್ಮ ಗ್ರಂಥ ಮಹಾಭಾರತದಲ್ಲಿ ಹೇಳಿರುವ ವಾಕ್ಯವಿದು. ನೀನು ಧರ್ಮವನ್ನು ರಕ್ಷಿಸಿದರೆ ಧರ್ಮವು ನಿನ್ನನ್ನು ರಕ್ಷಣೆ ಮಾಡುತ್ತದೆಯೋ ಮನುಜ ಎಂದು.
ಸನಾತನ ಧರ್ಮಕ್ಕೆ ಇಂತಿಷ್ಟೇ ವರ್ಷಗಳ ಇತಿಹಾಸ ಇದೆ ಎನ್ನುವುದಕ್ಕೆ ಯಾವ ಸಾಕ್ಷಿಗಳು ಸಹ ಇಲ್ಲ; ಅಷ್ಟು ಪುರಾತನ ಸನಾತನ ಧರ್ಮ ನಮ್ಮದು, ಋಷಿಮುನಿಗಳು ತಪ್ಪಸ್ಸು ಮಾಡಿದ ಪುಣ್ಯ ಭೂಮಿ ನಮ್ಮದು, ಲಕ್ಷಾಂತರ ವರ್ಷಗಳ ಕಾಲ ರಾಮಾಯಣ, ಮಹಾಭಾರತ ನಡೆದ ಭರತ ಖಂಡ ನಮ್ಮದು. ಸನಾತನ ಧರ್ಮ ನೆಲೆಯೂರಿದಾಗ ಯಾವ ಧರ್ಮಗಳೂ ಈ ಭೂಮಿಯ ಮೇಲೆ ಇನ್ನೂ ಕಣ್ಣು ಸಹಾ ಬಿಟ್ಟಿರಲಿಲ್ಲ ಬಿಡಿ.
ಆಧುನಿಕತೆಯ ಬಿಸಿಲುಕುದುರೆ ಏರಿರುವ ಹಿಂದೂಗಳು ಪಾಶ್ಚಾತ್ಯ ಸಂಸ್ಕೃತಿಯನ್ನು #WesternCulture ಅನುಕರಿಸಿ ನಮ್ಮ ಧರ್ಮದ ಮೂಲ ಆಚರಣೆ, ಸಂಪ್ರದಾಯಗಳ ಬಗ್ಗೆಯೇ ಮರೆಯುತ್ತಿರುವ ಆತಂಕ ಈಗ ಎದುರಾಗಿದೆ.
ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಇಡೀ ಭರತ ಖಂಡವನ್ನು ಸುತ್ತಿ, ವಿಶ್ವ ಪರ್ಯಟನೆ ಮಾಡಿ ಸನಾತನ ಧರ್ಮವನ್ನು ನಿದ್ದೆಯಿಂದ ಎಬ್ಬಿಸದೆ ಇಲ್ಲದಿದ್ದರೆ ಈ ವೇಳೆಗೆ ಭರತ ಖಂಡ ಮೊಹಮದ್ ಗಜನಿ ಸೇರಿ ಹಲವು ವಿದೇಶಿ ದಾಳಿಕೋರ ಹಾಗೂ ಸ್ವದೇಶಿ ದಾಳಿಕೋರ ಅನ್ಯಮತೀಯ ರಾಜರು ಹಿಂದೂ ದೇವಾಲಯಗಳನ್ನು ನಾಶ ಮಾಡಿ ಬಲವಂತವಾಗಿ ಸನಾತನ ಧರ್ಮದವರನ್ನು ಮತಾಂತರ ಮಾಡುತ್ತಿದ್ದರು.
ನಮ್ಮ ಹಿರಿಯರು ಸನಾತನ ಧರ್ಮಕ್ಕೆ ಭದ್ರ ಬುನಾದಿ ಹಾಕಿದ್ದರಿಂದಲೇ ಇಂದಿಗೂ ಹಿಂದೂ ಧರ್ಮವನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ, ಅದರಲ್ಲೂ ಪ್ರತಿಶತ 10ರಷ್ಟು ಹಿಂದೂಗಳು ಹಣದ ಆಸೆಗೆ ಇಲ್ಲವೇ ಅಧಿಕಾರದ ಆಸೆಗೆ ಅನ್ಯ ಕೋಮಿನವರ ಜೊತೆಗೆ ಸೇರಿ ಸನಾತನ ಧರ್ಮವನ್ನು ಮುಳುಗಿಸಬೇಕು ಎಂಬ ಪ್ರಯತ್ನ ಮಾಡುತ್ತಿರುವುದು ದುರಂತ.
ಆದರೆ, ಅವರಿಗೆ ತಿಳಿದಿರಲಿ ಇದು ಪ್ರಯತ್ನ ಅಷ್ಟೇ ಸನಾತನ ಧರ್ಮವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿ ಮೊನ್ನೆ ತಾನೆ ನಡೆದ ಮಹಾಕುಂಭಮೇಳ.
Also Read>> ಹಾಸನ | ಪೂಜಾ ರಘುನಂದನ್ ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಪ್ರಶಸ್ತಿ’ಗೆ ಭಾಜನ
ಹೌದು… ಸುಮಾರು 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ನಮ್ಮ ದೇಶದ ಅರ್ಧದಷ್ಟು ಜನ ಸಾಕ್ಷಿಯಾಗಿ ಸನಾತನ ಧರ್ಮ ಒಡೆಯುವವರಿಗೆ ಮರ್ಮಾಘಾತ ಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರಯಾಗರಾಜದಲ್ಲಿನ ಮಹಾಕುಂಭ ಮೇಳವು ಕೋಟ್ಯಂತರ ಹಿಂದೂಗಳನ್ನು ಒಗ್ಗೂಡಿಸಿ ಮತ್ತೊಮ್ಮೆ ಕೂಗಿ ಹೇಳಿದೆ ಸನಾತನ ಧರ್ಮದ ತಂಟೆಗೆ ಬರುವ ಅನ್ಯಧರ್ಮಿಯರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
ಉತ್ತರದಲ್ಲಿ ಕಾಶಿ, ಅಯೋಧ್ಯಾ, ಪ್ರಯಾಗರಾಜ್, ಹೃಷಿಕೇಶ್, ಶ್ರೀಶೈಲ ಎಷ್ಟು ಪವಿತ್ರವೋ, ದಕ್ಷಿಣದ ನಮಗೆ ರಾಮೇಶ್ವರ, ತಿರುಪತಿ, ಅಂಜನಾದ್ರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಭಿಕೆ, ಉಡುಪಿ, ಶೃಂಗೇರಿಗಳೂ ಸಹ ನಮಗೆ ಅತ್ಯಂತ ಪುಣ್ಯ ಸ್ಥಳಗಳು.
ನಮ್ಮ ನಂಬಿಕೆಯ ಈ ಪುಣ್ಯಕ್ಷೇತ್ರಗಳ ಸುದ್ದಿಗೆ ಯಾವ ಕೋಮಿನ ಜನರು ಮಾತನಾಡಲು ಕಟ್ಟರ್ ಹಿಂದುವಾದಿಗಳು ಬಿಡುವ ಮಾತೇ ಇಲ್ಲ. ಅಲ್ಲದೇ, ಈ ದೇವಸ್ಥಾನಗಳ ಹೆಸರು ಹಾಳು ಮಾಡೋಕೆ ಆಧರ್ಮದ ಕರ್ತೃಗಳು ಬಂದರು ಸಾಧ್ಯವಿಲ್ಲ, ಅಷ್ಟು ಗಟ್ಟಿಯಾಗಿ ನೆಲೆಯೂರಿದೆ ಈ ಕ್ಷೇತ್ರಗಳು.
ಭರತ ಖಂಡದಲ್ಲಿ ನಮ್ಮ ಸನಾತನ ಹಿಂದೂ ಧರ್ಮ ಯಾವುದೇ ದುಷ್ಟ ಶಕ್ತಿಗಳು ಸಾವಿರ ಸಂಖ್ಯೆಯಲ್ಲ ಲಕ್ಷ ಸಂಖ್ಯೆಯಲ್ಲಿ ಮಾತನಾಡಿದರೂ ಹಿಂದುಗಳ ಒಗ್ಗಟ್ಟನ್ನು ಒಡೆಯುವುದು ಸಾಧ್ಯವಿಲ್ಲದ ಮಾತು.
ಭರತ ಖಂಡ, ಸನಾತನ ಧರ್ಮ ಇಲ್ಲಿನ ದೇವಸ್ಥಾನಗಳು ಹಿಂದುಗಳ ಅಸ್ಮಿತೆ. ಇದನ್ನು ನಾಶ ಮಾಡುವುದಿರಲಿ, ಅಲುಗಾಡಿಸಲೂ ಸಹ ಎಷ್ಟೇ ಪ್ರಯತ್ನ ಪಟ್ಟರು ನೀವೇ ಸುಟ್ಟು ಭಸ್ಮವಾಗಿ ಹೋಗುತ್ತಿರೋ ಹೊರತು ಸನಾತನಿಯರಿಗೆ ಕಿಂಚಿತ್ತೂ ಏನು ಆಗೋದಿಲ್ಲ ನೆನಪಿರಲಿ.
ಹಿಂದೂ ಹಾಗೂ ಜೈನ ಪರಂಪರೆಯು ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ. ಎರಡು ಧರ್ಮಗಳು ಸಹ ಸನಾತನ ಧರ್ಮಕ್ಕೆ ಸೇರಿದ್ದು. ಕಾಲಾಂತರದಲ್ಲಿ ಕೆಲವು ವಿಭಿನ್ನ ಆಚರಣೆಯಲ್ಲಿ ಏರುಪೇರುಗಳು ಇದ್ದಾವೆ ಅಷ್ಟೇ. ಹೊರತಾಗಿ ಹಿಂದೂ ಜೈನ ಧರ್ಮಗಳು ಸನಾತನ ಧರ್ಮವೇ. ಮಹಾಕುಂಭದಲ್ಲಿ ಹಿಂದೂಗಳು ಎಷ್ಟು ಸಂಖ್ಯೆಯಲ್ಲಿ ಹೋಗಿ ಬಂದರೊ ಅಷ್ಟೇ ಸಂಖ್ಯೆಯಲ್ಲಿ ಜೈನರು ಕೂಡ ಮಹಾಕುಂಭದಲ್ಲಿ ಅಮೃತ ಸ್ನಾನ ಮಾಡಿ ಬಂದಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳಬೇಕು ನೆಚ್ಚಿನ ಬಾಂಧವರೇ.
ಒಟ್ಟಾರೆಯಾಗಿ ಸನಾತನ ಧರ್ಮದ ನೆಮ್ಮದಿ ಶಾಂತಿಯನ್ನು ಹಾಳು ಮಾಡುತ್ತೇವೆ ಎನ್ನುವುದು ನಿಮ್ಮ ಮನಸ್ಸಿನಲ್ಲಿ ಇದ್ದರೆ ಈಗಲೇ ತೆಗೆದುಹಾಕಿ. ಅದು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಅರೆ ಬೆಂದ ಹಿಂದೂ ಅಂದುಕೊಳ್ಳುವ ಮನಃಸ್ಥಿತಿಗಳು ಮಾತನಾಡಿದರೆ ಯಾವ ಪ್ರಯೋಜನವೂ ಕೂಡ ಆಗುವುದಿಲ್ಲ ಎನ್ನುವುದು ನೆನಪಿರಲಿ.
ಸೌಜನ್ಯಳಿಗೆ ನ್ಯಾಯ ಸಿಗಲಿ ಅನ್ನುವುದೇ ಕೋಟ್ಯಾಂತರ ಹಿಂಗೂಗಳ ಆಗ್ರಹ. ಆದರೆ, ಇದನ್ನೇ ನೆಪ ಮಾಡಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿನ ತಂಟೆಗೆ ಬಂದರೆ ಸನಾತನಿಯರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎನ್ನುವ ಪರಿಜ್ಞಾನ ಕೂಡ ಎಲ್ಲರ ಮನಸಲ್ಲಿ ಇರಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post