ನವದೆಹಲಿ: ದೇಶದ 46ನೆಯ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟಿಸ್ ರಂಜನ್ ಗೊಗೋಯ್ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೊಗೋಯ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನ ಬೋಧಿಸಿದರು.
Watch LIVE: Swearing-in-Ceremony of the Chief Justice of India Shri Justice Ranjan Gogoi at Rashtrapati Bhavan https://t.co/3kLEElsSBv
— President of India (@rashtrapatibhvn) October 3, 2018
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ನಿರ್ಗಮಿತ ಸಿಜೆಐ ದೀಪಕ್ ಮಿಶ್ರಾ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಸಚಿವ ರವಿಶಂಕರ್ ಪ್ರಸಾದ್ ಇದ್ದರು.
Shri Justice Ranjan Gogoi was sworn in as the 46th Chief Justice of the Supreme Court of India at Rashtrapati Bhavan today pic.twitter.com/Syx2lgwNOL
— President of India (@rashtrapatibhvn) October 3, 2018
ಸಿಜೆಐ ಗೊಗೋಯಿ ಅವರು 2019ರ ನವೆಂಬರ್ 17ರ ವರೆಗೆ ಸಿಜೆಐ ಆಗಿ ಕಾರ್ಯನಿರ್ವಸುತ್ತಾರೆ. ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ ನಿವೇಶನದ ಹಕ್ಕು ಮತ್ತು ಅಸ್ಸಾಂನಲ್ಲಿನ ಎನ್‌ಸಿಆರ್ ಸೇರಿದಂತೆ ಹಲವು ಅತ್ಯಂತ ಪ್ರಮುಖ ಪ್ರಕರಣಗಳು ಗೊಗೋಯಿ ಅವರ ಮುಂದೆ ಇತ್ಯರ್ಥಕ್ಕೆ ಬರಲಿವೆ.
ನಿರ್ಗಮಿತ ಸಿಜೆಐ ದೀಪಕ್ ಮಿಶ್ರಾ ಅವರ ಅಧಿಕಾರಾವಧಿ ಪೂರ್ಣಗೊಂಡು ಅವರು ನಿವೃತ್ತಿಯಾದ ಹಿನ್ನಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ರಂಜನ್ ಗೊಗೋಯ್ ಅವರನ್ನು ಆಯ್ಕೆ ಮಾಡಲಾಗಿತ್ತು.
Discussion about this post