ಕಲ್ಪ ಮೀಡಿಯಾ ಹೌಸ್
ಕಾಬೂಲ್: ಅಫ್ಘಾನಿಸ್ತಾನೀಯರು ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ವಿಮಾನಗಳಿಗೆ ಸುತ್ತುವರಿದು ಹತಾಶೆ ವ್ಯಕ್ತಪಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆದರೆ, ರತನ್‌ನಾಥ್ ದೇವಾಲಯದ ಹಿಂದೂ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಕಾಬೂಲ್ ದೇವಾಲಯ ಬಿಡಲು ಒಪ್ಪದೇ ಇರುವುದು ವ್ಯತಿರಿಕ್ತವಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಆಕ್ರಮಣವನ್ನು ಮುಂದುವರಿಸಿದಾಗ, ಕಾಬೂಲ್‌ನಿಂದ ಹೊರಹೋಗುವಂತೆ ಕುಮಾರ್ ಅವರನ್ನು ಒತ್ತಾಯಿಸಲಾಯಿತು. ಹಾಗೂ ಹಲವಾರು ಹಿಂದೂಗಳು ಆತನ ಪ್ರಯಾಣ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಮುಂದಾದರೂ, ಕುಮಾರ್ ಅವರು ದೇವಾಲಯ ಬಿಟ್ಟು ಹೋಗಲು ಒಪ್ಪಲಿಲ್ಲ ಎನ್ನಲಾಗಿದೆ.
ಕೆಲವು ಹಿಂದೂಗಳು ತನ್ನ ಪ್ರಯಾಣ ಮತ್ತು ವಾಸ್ಯವ್ಯಕ್ಕೆ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಹಾಗೂ ಕಾಬೂಲ್ ತೊರೆಯುವಂತೆ ತನ್ನನ್ನು ಒತ್ತಾಯಿಸಿದ್ದಾರೆ. ಆದರೆ ತಾನು ಇದನ್ನು ಕೈಬಿಡುವುದಿಲ್ಲ. ತನ್ನ ಪೂರ್ವಜರು ನೂರಾರು ವರ್ಷಗಳಿಂದ ಈ ಮಂದಿರಕ್ಕೆ ಸೇವೆ ಸಲ್ಲಿಸಿದ್ದಾರೆ. ತಾಲಿಬಾನ್ ತನ್ನನ್ನು ಕೊಂದರೆ, ತಾನು ಅದನ್ನು ನನ್ನ ಸೇವೆ ಎಂದು ಪರಿಗಣಿಸುತ್ತೇನೆ ಎಂದು ಪಂಡಿತ್ ರಾಜೇಶ್ ಕುಮಾರ್ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post