ಕೀರ್ತನಾ ಕ್ರಿಯೇಷನ್‌ಸ್ ಲಾಂಛನದಲ್ಲಿ ನಂದನ್ ಎಸ್. ತುಮಕೂರು ನಿರ್ಮಿಸುತ್ತಿರುವ ಕಡೆಮನೆ ಚಿತ್ರವು ಇದೀಗ ಸೆನ್ಸಾರ್ ಮನೆಯಲ್ಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಈ ಚಿತ್ರ ಸಂಪೂರ್ಣ ಹಳ್ಳಿಯಲ್ಲಿ ನಡೆಯುವ ಕಥೆಯಾಗಿದ್ದು, ಹಳ್ಳಿಯಲ್ಲಿ ಪಡ್ಡೆ ಹುಡುಗರು ಮಾಡುವ ಅವಾಂತರ, ಮುಚ್ಚಿಟ್ಟ ಸತ್ಯ ಸಂಗತಿಗಳ ನಡುವೆ ನಡೆಯುವ ಹಾರಾರ್ ಕಥಾನಕವನ್ನು ವಿನಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರವನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ, ಮಧುಸೂದನ್ ಹಾಗೂ ಶಾಮ್ ಛಾಯಾಗ್ರಹಣ, ರಘುನಾಥ್ ಸಂಕಲನ, ಅರುಣ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ಧನಂಜಯ ಹಾಗೂ ವಿಜಯ್ ಸಂಭಾಷಣೆ, ಲೋಕೇಶ್ ಅವರ ಸಾಹಿತ್ಯವಿದೆ.
ಯುವರಾಜ್, ಕಲ್ಪನಾ, ಬಾಲರಾಜ್ ವಾಡಿ, ಐಯೇಶ, ಹೂಡಿ ರಂಗ, ಬ್ಯಾಂಕ್ ಜನಾರ್ಧನ್, ಸಿಲ್ಲಿ ಲಲ್ಲಿ ಶ್ರೀನಿವಾಸ್ ಗೌಡರು, ಮಂಡ್ಯ ಸಿದ್ದು, ವಿಜಯ್, ಇಂದ್ರಜಿತ್, ಗಜ, ಇನ್ನೂ ಮುಂತಾದವರ ತಾರಾಬಳಗವಿದೆ.
Discussion about this post