ಕಲ್ಪ ಮೀಡಿಯಾ ಹೌಸ್ | ಕಡೂರು |
ದನದ ಸಂತೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಕದ್ದ ಹಸು ಹಾಗೂ ದನವನ್ನು ಪತ್ತೆ ಮಾಡಿರುವ ಪೊಲೀಸರು, ಪ್ರಕರಣ ಕುರಿತಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಕಡೂರು ತಾಲೂಕಿನ ಹಲವಾರು ಕಡೆ ಜಾನುವಾರುಗಳ ಕಳ್ಳತನ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಿಪಿಐ ಕಡೂರು ವೃತ್ತ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
Also read: ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಸಾವು | ಘಟನೆ ನಡೆದಿದ್ದೆಲ್ಲಿ?

ಈ ವ್ಯಕ್ತಿಗಳು ನಿಡಘಟ್ಟ ಗ್ರಾಮದಿಂದ 03 ಹಸುಗಳು ಮತ್ತು 01 ಹೋರಿ ಕರುವನ್ನು ಕಳ್ಳತನ ಮಾಡಿಕೊಂಡು ದನದ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಇವರು ಕಡೂರು, ಸಖರಾಯಪಟ್ಟಣ ಮತ್ತು ಇತರೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಆರೋಪಿಗಳಿಂದ ಒಟ್ಟು ರೂ. 6.30 ಲಕ್ಷ ಮೌಲ್ಯದ ಗೂಡ್ಸ್ ವಾಹನ, 3 ಹಸುಗಳು ಮತ್ತು 1 ಹೋರಿ ಕರುವನ್ನು ವಶಪಡಿಸಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Discussion about this post