ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಬಿಜೆಪಿಯ ಶಾಸಕರು ಸಿಂಹ ಇದ್ದ ಹಾಗೆ, ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಹೋಗೋದೇ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಪೀಸ್ ಪೀಸ್ ಆಗಿದೆ. ನಮ್ಮ ಶಾಸಕರೆಲ್ಲ ಚಿನ್ನದ ಗಟ್ಟಿ ತರ ಇದ್ದಾರೆ. ಚುನಾವಣೆ ಬಂದರೆ ಬಿಜೆಪಿಗೆ ಖುಷಿ, ಕಾಂಗ್ರೆಸ್‌ಗೆ ನಡುಕ. ಚುನಾವಣೆ ಅಂದರೆ ಗೆಲುವು ಬಿಜೆಪಿಗೆ ಫಿಕ್ಸ್… ಸಾಯೋ ಪಾರ್ಟಿ ಅಂದ್ರೆ ಅದು ಕಾಂಗ್ರೆಸ್… ಹೀಗಾಗಿ ಎರಡೂ ಬೈ ಎಲೆಕ್ಷನ್ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಇಡೀ ವಿಶ್ವವೇ ಮೋದಿ ಅವರನ್ನು ಮೆಚ್ಚಿಕೊಂಡಿದೆ. ಖರ್ಗೆಯವರು ಹೇಳಿದರೆ, ಜನ ಮೆಚ್ಚುತ್ತಾರಾ… ನರೇಂದ್ರ ಮೋದಿ ಚಿನ್ನದ ಗಟ್ಟಿ ಇದ್ದ ಹಾಗೆ, ಚಿಲ್ಲರೆ ಮನುಷ್ಯ ಅಂದ್ರೆ ಯಾರಾದ್ರೂ ಒಪ್ಪುತ್ತಾರಾ, ಬಾಯಿ ತಪ್ಪಿ ಹೇಳಿದ್ರೆ ಖರ್ಗೆ ಕ್ಷಮೆ ಕೇಳಲಿ. ಈ ಮಾತಿನಿಂದ ನನಗಂತೂ ಬಹಳ ಬೇಜಾರಾಗಿದೆ ಎಂದರು.
2024ರೊಳಗೆ ಮನೆಮನೆಗೆ ಶುದ್ದ ಕುಡಿಯುವ ನೀರು. ಹಾಗೂ ರಾಜ್ಯದಲ್ಲಿ 750 ಪಂಚಾಯತಿಗಳನ್ನು ಆಯ್ಕೆ ಮಾಡಿ, ಪ್ರತಿ ಪಂಚಾಯತಿಗೆ 25 ಲಕ್ಷ ರೂ. ನಿಗದಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post