ಕಲ್ಪ ಮೀಡಿಯಾ ಹೌಸ್ | ಕಳಸ |
ನಿರಂತರವಾಗಿ ಭಾರೀ ಮಳೆಯ ಪರಿಣಾಮ ಕಳಸ-ಹೊರನಾಡು #Kalasa-Horanadu ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯ ಮೇಲೆ ನದಿಯ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಭಾಗದಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಹೆಬ್ಬಾಳೆ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಕಳಸ ಹಾಗೂ ಹೊರನಾಡು ನಡುವಿನ ಸಂಪರ್ಕ ಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿಗಳನ್ನುನಿಯೋಜಿಸಿಲಾಗಿದೆ.
Also read: ಸೊರಬ | ಜುಲೈ 20ರಂದು ರೋಟರಿ ಪದಗ್ರಹಣ ಸಮಾರಂಭ
ಸಾರ್ವಜನಿಕರು ಸೇತುವೆಯ ಬಳಿ ಹೋಗಬಾರದಾಗಿ ಹಾಗೂ ತಮ್ಮ ಜಾನುವಾರುಗಳನ್ನು ಸೇತುವೆಯ ಬಳಿ ಬಿಡಬಾರದಾಗಿ ಪೊಲೀಸ್ ಅಧಿಕಾರಿಗಳು ಕೋರಿದ್ದಾರೆ.
ಬದಲಿ ಮಾರ್ಗ ಹೀಗಿದೆ
ಕಳಸದಿಂದ ಹೊರನಾಡಿಗೆ ಹೋಗುವವರು ಹಳುವಳ್ಳಿಯಿಂದ ದಾರಿಮನೆ ಮಾರ್ಗವಾಗಿ ಹಾಗೂ ಹೊರನಾಡಿನಿಂದ ಕಳಸಕ್ಕೆ ಬರುವವರು ದಾರಿಮನೆ ಇಂದ ಹಳುವಳ್ಳಿ ಮಾರ್ಗವಾಗಿ ಸಂಪರ್ಕಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.
ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post