ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಹಾಸನ – ಸೋಲಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿರುವ ಘಟನೆ ಇಂದು ಮುಂಜಾನೆ ಶಹಬಾದ್ ತಾಲೂಕಿನ ಮರತೂರ ಬಳಿ ನಡೆದಿದೆ
ಬ್ರೇಕ್ ಬೈಡಿಂಗ್ ತಾಂತ್ರಿಕ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ, ಪಾಯಿಂಟ್ ಮ್ಯಾನ್ ಇದನ್ನು ಗಮನಿಸಿ ರೇಡ್ ಹ್ಯಾಂಡ್ ಸಿಗ್ನಲ್ ತೋರಿಸಿ ರೈಲು ನಿಲ್ಲಿಸಿದ್ದಾರೆ. ಬಳಿಕ ಪರಿಶೀಲಿಸಿ, ಕೋಚ್ ಸಂಖ್ಯೆ CR 227454 LS-5 ಎಂಜಿನ್ ನಿಂದ 4ನೇ ಕೋಚ್‌ನಲ್ಲಿ ಕಾಣಿಸಿಕೊಂಡಿದ್ದ ಬ್ರೇಕ್ ಬೈಂಡಿಂಗ್ ಸಮಸ್ಯೆ ದೋಷ ಸರಿಪಡಿಸಲಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಬ್ರೇಕ್ ಬೈಡಿಂಗ್ ದೋಷ ಸರಿಪಡಿಸಿದ ಬಳಿಕ ಪುನಃ ರೈಲು ಸಂಚರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post