ಬೆಂಗಳೂರು: ಕೋರಮಂಗಲದಲ್ಲಿ ಆರಂಭಿಸಲಾಗಿರುವ ವಿಶಿಷ್ಟ ಶೈಲಿಯ ಹೊಸ ಕೆಫೆ ಕೇಂದ್ರವನ್ನು ಸಚಿವ ಡಿ. ಕೆ. ಶಿವಕುಮಾರ್ ಇಂದು ಉದ್ಘಾಟಿಸಿದರು.
ಈ ವೇಳೆ ಪಾನೀಯ ಮತ್ತು ಬರ್ಗರ್ ಸವಿದ ನಂತರ ಮಾತನಾಡಿದ ಅವರು, ಈ ತಿನಿಸುಗಳ ರುಚಿಯಾಗಿವೆ. ಮಸಾಲೆಯುಕ್ತ ಕಿಕ್ ಹೊಂದಿರುವ ಪಾನೀಯ ವಿಭಿನ್ನವಾಗಿದೆ ಎಂದರು.

ಕುಲ್ಲುಕಿ ಬ್ರಾಂಡ್ ಐಸ್ ಕ್ರೀಮ್ ಮತ್ತು ಜ್ಯೂಸ್ ಸೇವಿಸಿ ಶ್ಲಾಘಿಸಿದರು.
ಕುಲ್ಲುಕ್ಕಿ ದಕ್ಷಿಣ ಭಾರತದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ವಿತರಿಸುವ ಎಂ ಎನ್ ಹೆಚ್ ಸಂಸ್ಥೆಯ ಪೋಷಕ ಅಂಗವಾಗಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಇಒ, ಮೊಯಿದ್ದೀನ್ ಹಾಗೂ ಸಿಎಫ್‌ಒ, ನೌಷಾದ್ ಉಪಸ್ಥಿತರಿದ್ದರು.
















