ಭದ್ರಾವತಿ: ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ನಗರದಲ್ಲಿ ಇಂದು ರಾತ್ರಿ 8 ಗಂಟೆಗೆ ನಗರದ ಹೊಸಮನೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಭದ್ರಾವತಿಗೆ ಮುತಾಲಿಕ್ ಆಗಮನ ಹಾಗೂ ಅವರ ಭಾಷಣ ಕುರಿತಾಗಿನ ವಿಚಾರ ಅತ್ಯಂತ ಗೌಪ್ಯವಾಗಿಡಲಾಗಿದೆ. ಆದರೆ, ಈ ವಿಚಾರ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಇಂದು ಮಧ್ಯಾಹ್ನವೇ ಮುತಾಲಿಕ್ ಭದ್ರಾವತಿಗೆ ಆಗಮಿಸಿದ್ದು, ರಾತ್ರಿ 8 ಗಂಟೆಗೆ ಹೊಸಮನೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
Discussion about this post