ಹೌದು… ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ, ರಾಜ್ಯದಲ್ಲಿರುವ ಕೆಲವೇ ಕೆಲವು ನಿಖರ ಜ್ಯೋತಿಷಿಗಳಲ್ಲಿ ಅಗ್ರಗಣ್ಯರು. ಗುಜರಾತ್, ಕರ್ನಾಟಕ ವಿಧಾನಸಭಾ ಚುನಾವಣೆಯ ಹಾಗೂ ಪ್ರಮುಖವಾಗಿ 2014 ಮತ್ತು 2019ರ ಲೋಕಸಭಾ ಚುನಾವಣೆ ವಿಚಾರದಲ್ಲಿ ಇವರು ನುಡಿದ ಭವಿಷ್ಯ ಸತ್ಯವಾಗಿದ್ದು ಈಗ ಇತಿಹಾಸವಾಗಿದೆ.
ಇದೇ ಪ್ರಕಾಶ್ ಅಮ್ಮಣ್ಣಾಯ ಅವರು ಸೆಪ್ಟೆಂಬರ್ 2ರ ಸೋಮವಾರ ಸಂಜೆ ತಮ್ಮ ಫೇಸ್’ಬುಕ್’ನಲ್ಲಿ ಹಾಕಿದ್ದ ಒಂದು ಪೋಸ್ಟ್ ತೀವ್ರ ಕುತೂಹಲ ಕೆರಳಿಸಿತ್ತು.(ಕೆಳಗಿನ ಸ್ಕ್ರೀನ್ ಶಾಟ್ ನೋಡಿ)
ವೃಷಭ ರಾಶಿಯಲ್ಲಿ ಶನಿಯಿರುವ ಜಾತಕದ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ನಿರಂತರವಾಗಿ ವಿಚಾರಣೆ ಮಾಡುತ್ತಿದ್ದರು. ಹೀಗಾಗಿ, ಈ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿದ ಹಿನ್ನೆಲೆಯಲ್ಲಿ ಪ್ರಕಾಶ್ ಅಮ್ಮಣ್ಣಾಯ ಅವರೊಂದಿಗೆ ಈ ವಿಚಾರವಾಗಿ ಕರೆ ಮಾಡಿ ಚರ್ಚಿಸಲಾಯಿತು.
ಎಲ್ಲಕ್ಕೂ ಮೊದಲು ಹೇಳಬೇಕಾದ ವಿಚಾರವೆಂದರೆ, ಸುಮಾರು ಒಂದು ವರ್ಷಕ್ಕೂ ಮುನ್ನವೇ ಖಾಸಗಿ ಚರ್ಚೆಯ ವೇಳೆ ಮಾತನಾಡುವಾಗ ಒಂದು ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಬಂಧನ ನಿಶ್ಚಿತ ಎಂಬ ಮಾತನ್ನು ಅವರ ಜಾತಕ ವಿಮರ್ಷೆ ಮಾಡಿದ ಅಮ್ಮಣ್ಣಾಯ ಕಲ್ಪ ನ್ಯೂಸ್’ಗೆ ಹೇಳಿದ್ದರು. ಆದರೆ, ಈ ವಿಚಾರವನ್ನು ಪ್ರಕಟಿಸುವುದು ಬೇಡ ಎಂದವರು ವಿನಂತಿಸಿದ್ದ ಹಿನ್ನೆಲೆಯಲ್ಲಿ ಪ್ರಕಟಿಸಿರಲಿಲ್ಲ.
ಇನ್ನು, ಸೆಪ್ಟೆಂಬರ್ 2ರಂದು ಫೇಸ್ ಬುಕ್’ನಲ್ಲಿ ಬರೆದಿದ್ದ ಅಮ್ಮಣ್ಣಾಯ ಅವರು, ‘ವೃಷಭದಲ್ಲಿ ಶನಿ ಇರುವ ಜಾತಕರು, ವೃಷಭ ರಾಶಿಯವರು,
ಕನ್ಯಾರಾಶಿಯಲ್ಲಿ ಶನಿ ಇದ್ದವರಿಗೆ ಈ ಗೋಚರದ ಧನು ರಾಶಿ ಶನಿಯು ವಿಪರೀತ ಹಿಂಸೆ ನೀಡುತ್ತಾನೆ. 2020 ಜನವರಿವರೆಗೆ ಶನಿಯು ಧನುರಾಶಿಯಲ್ಲಿ ಇದ್ದಾನೆ’ ಎಂದು ಹಾಕಿದ್ದರು.
ಹೀಗಾಗಿ, ಈ ಬಗ್ಗೆ ಅವರಲ್ಲಿ ಕೇಳಿದಾಗ ರಾಜಕೀಯ ಬೇಡ ರೀ, ಸಾಕು ಎಂದರು. ಆದರೆ, ನಾವು ಅವರನ್ನು ಬಿಡಲಿಲ್ಲ. ವೃಷಭಕ್ಕೆ ಶನಿ ಆಗಮಿಸಿ ಇಷ್ಟು ಕಾಲವಾದರೂ ಹೇಳದವರು ಈಗ ಏತಕ್ಕಾಗಿ ಹೀಗೆ ಮಾರ್ಮಿಕವಾಗಿ ಹೇಳಿದ್ದೀರಿ? ಇದರ ಹಿಂದಿನ ರಹಸ್ಯವೇನು ಎಂದು ಕೇಳಿದಾಗ ಅವರ ಹೇಳಿದ್ದಿಷ್ಟು.
ನಾನು ಪೋಸ್ಟ್’ನಲ್ಲಿ ಉಲ್ಲೇಖಿಸಿದಂತೆ ಈ ಜಾತಕರಿಗೆ ಇಂತಹ ಸಂಕಷ್ಟಗಳು ತಪ್ಪಿದ್ದಲ್ಲ. ಡಿಕೆಶಿ ಬಂಧನವಾಗುತ್ತದೆ ಎಂಬುದು ಅವರ ಜಾತಕದ ಆಧಾರದಲ್ಲಿ ನನಗೆ ಒಂದು ವರ್ಷ ಹಿಂದೆಯೇ ತಿಳಿದಿತ್ತು. ಆದರೆ, ಕೆಲವೊಂದು ಸೂಕ್ಷ್ಮವಿಚಾರಗಳ ಹಲವರಿಗೆ ಕಿರಿಕಿರಿ ಉಂಟು ಮಾಡುತ್ತವೆ. ಹೀಗಾಗಿ, ಯಾರಿಗೂ ತೊಂದರೆಯಾಗುವುದು ಬೇಡವೆಂದು ಎಲ್ಲೂ ಈ ವಿಚಾರವನ್ನು ಉಲ್ಲೇಖಿಸಿರಲಿಲ್ಲ. ಆದರೆ, ಈಗ ಡಿಕೆಶಿ ಅವರ ಸಂಕಷ್ಟದ ಕಾಲ ವಿಪರೀತಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಈ ರೀತಿ ಹಾಕಿದ್ದೇನೆ ಎಂದರು.
Discussion about this post