ಜೆಡಿಎಸ್-ಕಾಂಗ್ರೆಸ್ ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಸಂಜೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಮುಂಜಾನೆ ಸ್ವತಃ ಯಡಿಯೂರಪ್ಪ ಮಾಧ್ಯಮಗಳ ಮುಂದೆ ಮಾತನಾಡಿ, ಇಂದು ಸಂಜೆ 6.30ಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ. ಇದಕ್ಕೆ ರಾಜ್ಯಪಾಲರ ಅನುಮತಿಯೂ ಸಹ ದೊರೆತಿದೆ ಎಂದಿದ್ದಾರೆ.
ನಿನ್ನೆ ರಾತ್ರಿಯವರೆಗೂ ಇಲ್ಲದಿದ್ದ ಈ ಬೆಳವಣಿಗೆ, ಇಂದು ಮುಂಜಾನೆಯಿಂದ ಗರಿಗೆದರಿದ್ದು, ಸಂಜೆ ಯಡಿಯೂರಪ್ಪ ಒಬ್ಬರೇ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವುದು ವಿಶೇಷವಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಮುಹೂರ್ತದ ಕುರಿತಾಗಿ ರಾಷ್ಟ್ರದ ಪ್ರಖ್ಯಾತ ನಿಖರ ಜ್ಯೋತಿಷಿ ಶ್ರೀ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಸಂಪರ್ಕಿಸಲಾಯಿತು.
ಆದರೆ, ತಾವು ಯಾವುದೇ ಕಾರಣಕ್ಕೂ ಬಿ.ಎಸ್. ಯಡಿಯೂರಪ್ಪನವರ ವಿಚಾರದಲ್ಲಿ ವೈಯಕ್ತಿಕವಾಗಿಯಾಗಲೀ ಅಥವಾ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗೆಗಾಗಲೀ ಹೇಳುವುದಿಲ್ಲ. ಕಲ್ಪ ನ್ಯೂಸ್ ಕೇಳಿದಂತೆ ಕೇವಲ ಇಂದಿನ ಮಕರ ಲಗ್ನ ಕುಂಡಲಿಯ ಬಗ್ಗೆ ಮಾತ್ರ ತಿಳಿಸುತ್ತೇನೆ ಎಂದು ಅವರು ಹೇಳಿದ್ದಿಷ್ಟು.
26.7.2019-ಸಂಜೆ ಆರುವರೆ ಘಂಟೆ-ಮಕರ ಲಗ್ನ. ಈ ಕುಂಡಲಿಯ ಬಗ್ಗೆ ವಿಶ್ಲೇಷಣೆ:
- ಲಗ್ನಾಧಿಪತಿ ಶನಿಯು ಕೇತುವಿನೊಡನೆ ವ್ಯಯ ಸ್ಥಾನದಲ್ಲಿ ಶನಿ ಉದಯ. ದ್ವಿತೀಯ ಸ್ಥಾನಕ್ಕೆ ಶನಿಯ ತೃತೀಯ ದುರಿತ ಪೂರ್ಣ ದೃಷ್ಟಿಯು ಪಥನ ಸೂಚಕ.
- ಭರಣೀ ನಕ್ಷತ್ರ ಪಟ್ಟಾಭಿಷೇಕಕ್ಕೆ ಯೋಗ್ಯವಲ್ಲ.
- ರವಿಯು ಆಡಳಿತ,ಶನಿಯು ಆಡಳಿತಗಾರ. ಇವರಿಗೆ ಷಷ್ಟಾಷ್ಟಮ ಇದ್ದಾಗ ರಾಜ್ಯ ಪಥನ ಸೂಚಕ.
- ಮಕರ ಲಗ್ನಕ್ಕೆ ದುರಿತಾಧಿಪತಿ, ವ್ಯಯಾಧಿಪತಿ ಗುರು ಏಕಾದಶದಲ್ಲಿ. ಪಟ್ಟಾಭಿಷೇಕಕ್ಕೆ ಏಕಾದಶ ಶುದ್ಧ ಇರಬೇಕು. ಅದರ ಅಧಿಪತಿಯೂ ಸ್ವಚ್ಛವಿರಬೇಕು. ಅಧಿಪತಿ ಕುಜ ನೀಚನಾಗಿ ಯುದ್ಧ ಸ್ಥಿತಿ. ಆ ಏಕಾದಶದಲ್ಲಿ ದುರಿತಾಧಿಪತಿ ಗುರುವೂ, ಅವನ ದೃಷ್ಟಿ ಕುಜನಿಗೂ ಇರುವುದು ಅಶುಭ. ಲಗ್ನದ ಷಷ್ಟಾಧಿಪತಿ ಬುಧನ ನಕ್ಷತ್ರ ಜ್ಯೇಷ್ಟದಲ್ಲಿ ಅಶುಭ ಸೂಚಕ. ಆ ಗುರು ರಾಶ್ಯಾಧಿಪತಿ ಕುಜನು ಭೃಗು ಅಂಗಾರಕ, ಬುಧಾಂಗಾರಕ(ಬುಧಾಂಗಾರಕ ಯುದ್ಧ) ರವಿ ಶುಕ್ರ ಯೋಗ, ಇರುವುದು ಉತ್ತಮವಲ್ಲ. ಸಪ್ತಮವು ನಿವೃತ್ತಿ ರಾಶಿಯಾಗಿ ಮಕರಕ್ಕೆ ಮಾರಕವೂ ಆಗಿ ಅಲ್ಲಿ ಯುದ್ಧ ಸ್ಥಿತಿ ಇದ್ದಾಗ ಅಶುಭ.
- ಇನ್ನು ದಿನದ ನಕ್ಷತ್ರಕ್ಕೆ ಶುಕ್ರದಶೆ. ಈ ಮಕರ ಲಗ್ನಕ್ಕೆ ಮೇಷ ರಾಶಿಗೆ 22 ನೇ ದ್ರೇಕ್ಕಾಣಾಧಿಪತಿ ಕ್ರಮವಾಗಿ ರವಿ ಮತ್ತು ಬುಧ. ಇವರ ಪೂರ್ಣ ದೃಷ್ಟಿ ಲಗ್ನಕ್ಕೆ ಇದೆ.
- ಗುರು ಚಂದ್ರ ಷಷ್ಟಾಷ್ಟಮವಾಗಿ ದಿನಕ್ಕೆ ದೈವ ಬಲ ಶೂನ್ಯ.
ಇಷ್ಟೆಲ್ಲ ದೋಷವಿದ್ದ ಮುಹೂರ್ತದಲ್ಲಿ ಸತ್ಕರ್ಮ ಮಾಡಿದವರಿಗೂ, ಮಾಡಿಸಿದವರಿಗೂ, ಮುಹೂರ್ತ ಕೊಟ್ಟವರಿಗೂ ಮಹಾ ದೋಷ ಇರುತ್ತದೆ.
Discussion about this post