ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕುಂದಾಪುರ: ಹೌದು… ಕುಂದಾಪುರದ ಆ ಶಾಲೆಯ ಮಕ್ಕಳು ಸಂತಸ ಹಾಗೂ ಸಂಭ್ರಮದಿಂದ ಕುಣಿಯುತ್ತಿದ್ದರು. ಇದಕ್ಕೆ ಕಾರಣವೇನು ಗೊತ್ತಾ? ಆ ಶಾಲೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ ನೀಡಿದ್ದು.
ಬಾಲ್ಯದಲ್ಲಿ ತಾವು ಓದಿದ್ದ ಕುಂದಾಪುರದ ಶಾಲೆಗೆ ರಿಷಬ್ ಭೇಟಿ ನೀಡಿದ್ದರು. ಈ ವೇಳೆ ಅತ್ಯಂತ ಸಂಭ್ರಮ ಹಾಗೂ ಸಂತಸದಿಂದ ಕುಣಿದಾಡುತ್ತಿದ್ದ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಬೆರೆತ ಅವರು ನಿಜಕ್ಕೂ ತಾವೂ ವಿದ್ಯಾರ್ಥಿಯೇ ಆಗದ್ದಿರು.
ಬಾಲ್ಯಕ್ಕಂತೂ ಮರಳಲು ಸಾಧ್ಯವಿಲ್ಲ, ಆದರೆ ಬಾಲ್ಯದ ನೆನಪಗಳನ್ನಾದರೂ ಆಗಾಗ ಸವಿದು ಸಂತಸಪಡೋಣಾ. pic.twitter.com/Czjno6DMkp
— Rishab Shetty (@shetty_rishab) November 23, 2019
ತಾವು ಎಸ್’ಎಸ್’ಎಲ್’ಸಿ ತನಕ ಕಲಿತಿದ್ದ ಶಾಲೆಗೆ ಭೇಟಿ ನೀಡಿದ್ದ ವೀಡಿಯೋ ಹಾಗೂ ಫೋಟೋಗಳನ್ನು ರಿಷಬ್ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಪ್ರೈಮರಿ ಸ್ಕೂಲಿನ ಬೋರ್ಡು ಸಿನಿಮಾ ಆಯ್ತು. ಹಾಗೇಯೇ ಇಂದು ನಾನು ಓದಿದ್ದ ಕುಂದಾಪುರದ ಬೋರ್ಡ್ ಹೈ ಸ್ಕೂಲ್’ಗೆ ಭೇಟಿ ನಿಡುವ ಅವಕಾಶ ಸಿಕ್ಕಿತು. ಎಸ್ಸೆಸಲ್ಸಿ ತನಕ ಓದಿದ್ದ ಶಾಲೆಗೆ ಬಹಳ ವರ್ಷಗಳ ನಂತರ ಭೇಟಿ ನೀಡಿದ್ದು ಹಳೆಯ ನೆನಪುಗಳನ್ನೆಲ್ಲಾ ಹರಡಿಕೊಂಡು ಕೂರುವಂತಾಯ್ತು ಎಂದು ಬರೆದುಕೊಂಡಿದ್ದಾರೆ.
ಶಾಲೆ ಕಾಲಕ್ಕೆ ತಕ್ಕಂತೆ ಕೊಂಚ ಬದಲಾಗಿದ್ದರೂ ಇಲ್ಲಿನ ಕ್ಲಾಸ್ ರೂಂ, ಕೂರುತ್ತಿದ್ದ ಡೆಸ್ಕು, ಆಡಿ ಬೆಳೆದ ಮೈದಾನಗಳಿಗೆ ಇನ್ನೂ ನನ್ನ ಗುರುತಿದೆ ಎನ್ನಿಸಿತು. ಅದರಲ್ಲೂ ಅಗಾಧವಾದ ಪ್ರೀತಿ ತೋರಿಸಿದ ಇಲ್ಲಿನ ಮಕ್ಕಳ ಮುಗ್ಧ ನಗುವಿನಲ್ಲಿ, ತುಂಟತನದಲ್ಲಿ ಖಂಡಿತ ನಾನಿದ್ದೆ. ನನ್ನ ಬಾಲ್ಯದ ನೆನಪುಗಳಿದ್ದವು ಎಂಬ ಭಾವನೆಗಳನ್ನು ಇನ್ನೊಂದು ಟ್ವೀಟ್’ನಲ್ಲಿ ಅವರು ಹಂಚಿಕೊಂಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post