ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಹೆಸರಾಂತ ವಿದ್ವಾಂಸ, ನಿವೃತ್ತ ಪತ್ರಕರ್ತ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರು ಈ ಬೆಳಗ್ಗೆ ಅಂಬಲಪಾಡಿಯ ತಮ್ಮ ನಿವಾಸದಲ್ಲಿ ನಿಧನರಾದರು.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಅಅವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಓರ್ವ ಪುತ್ರ ಇತ್ತೀಚೆಗೆ ನಿಧನರಾಗಿದ್ದರು.
ಅಧ್ಯಾತ್ಮ ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಅವರು ಪೇಜಾವರ ಮಠದ ಹಿರಿಯ ಯತಿಗಳಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಮಕಾಲೀನರಾಗಿದ್ದರು. ಹಲವಾರು ಗ್ರಂಥಗಳನ್ನು ರಚಿಸಿದ್ದರು.
ಕೃತಿರಚನೆಗಳು
- ಬಾಣಭಟ್ಟನ ಕಾದಂಬರಿ
- ಕಾಳೀದಾಸನ ಶಾಕುಂತಲಾ
- ಶೂದ್ರಕನ ಮೃಚ್ಛಕಟಿಕ
ಟಿಪ್ಪಣಿಗಳು
- ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ಆನ೦ದಮಾಲಾ
- ತ್ರಿವಿಕ್ರಮ ಪ೦ಡಿತರ ವಾಯುಸ್ತುತಿ
- ವಿಷ್ಣುಸ್ತುತಿ ಇತ್ಯಾದಿ ಕೃತಿಗಳಿಗೆ ಟಿಪ್ಪಣಿ
- ಆರು ಉಪನಿಷತ್ತುಗಳಿಗೆ ಟೀಕೆ
- ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ’ಯಮಕ ಭಾರತ’
- ಭಾಗವತ ತಾತ್ಪರ್ಯ
ಕನ್ನಡಕ್ಕೆ ಅನುವಾದ
- ಪುರುಷಸೂಕ್ತ
- ಶ್ರೀ ಮದ್ಭಗವದ್ಗೀತೆ
- ಶ್ರೀ ಸೂಕ್ತ
- ಶಿವಸೂಕ್ತ
- ನರಸಿಂಹ ಸ್ತುತಿ
- ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡೀಕರಿಸಿದ್ದಾರೆ
- ಮಧ್ವಾಚಾರ್ಯರ ಮಾಧ್ವರಾಮಾಯಣ
- ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ
ಕನ್ನಡ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿರುವ ಇವರು, ಚಲನಚಿತ್ರ ಲೋಕಕ್ಕೂ ಬನ್ನಂಜೆಯವರು ಕೆಲಸ ಮಾಡಿದ್ದಾರೆ. ಜಿ.ವಿ. ಅಯ್ಯರ್ ಅವರಸಂಸ್ಕೃತ ಚಲನಚಿತ್ರ ’ಶ್ರೀ ಶಂಕರಾಚಾರ್ಯ’, ’ಶ್ರೀ ಮಧ್ವಾಚಾರ್ಯ’, ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ. ಕನ್ನಡದ ಖ್ಯಾತ ನಟ ವಿಷ್ಣುವರ್ಧನರ ಆಧ್ಯಾತ್ಮಿಕ ಗುರುವಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post