ಕಲ್ಪ ಮೀಡಿಯಾ ಹೌಸ್ | ಕಾರ್ಗಲ್ |
ವಿಶ್ವವಿಖ್ಯಾತ ಜೋಗ ಜಲಪಾತ ಮತ್ತು ಪ್ರಸಿದ್ಧ ಧಾರ್ಮಿಕ ತಾಣವಾದ ಸಿಗಂದೂರಿಗೆ ಸುಲಭವಾಗಿ ಸಂಪರ್ಕ ಸಾಧಿಸುವುದಕ್ಕಾಗಿ ಜನವರಿಯಲ್ಲಿ ಆರಂಭಿಸಲಾಗಿರುವ ಮುಪ್ಪಾನೆ-ಕಡವು ಸಂಚಾರಿ ಬೋಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಸಂಪರ್ಕ ಸಾಧನದಿಂದ ಪ್ರಸಕ್ತ ರಸ್ತೆ ಮಾರ್ಗದಲ್ಲಿ 85 ಕಿ.ಮೀಗಳಷ್ಟು ದೂರ ಕ್ರಮಿಸಬೇಕಿದ್ದ ಲಘು ವಾಹನಗಳು, ಕೇವಲ 40 ಕಿ.ಮೀ ಅಂತರದಲ್ಲಿ ಗುರಿ ಮುಟ್ಟುತ್ತಿರುವ ಬಗ್ಗೆ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

Also read: ವನಮಹೋತ್ಸವ ಕಾರ್ಯಕ್ರಮಕ್ಕೆ ಸುನಿತಾ ಶ್ರೀಧರನ್ ಚಾಲನೆ
ಜಲಮಾರ್ಗದ ಮೂಲಕ ಕೇವಲ 10 ನಿಮಿಷಗಳ ಅಂತರದಲ್ಲಿ ಹಲಿಕೆ ಗ್ರಾಮದ ಶರಾವತಿ ಹಿನ್ನೀರಿನ ದಡಕ್ಕೆ ತಲುಪಿಸುತ್ತದೆ. ಹಲಿಕೆ ಕಡವು ಮಾರ್ಗದಿಂದ 20 ಕಿ.ಮೀ ಅಂತರದಲ್ಲಿ ಸಿಗಂದೂರು ಚೌಡೇಶ್ವರಿ ದೇಗುಲವನ್ನು ತಲುಪಲು ಸಾಧ್ಯವಾಗುತ್ತಿದೆ. ಹಿನ್ನೀರಿನ ನಿಸರ್ಗರಾಶಿಯ ನಡುವೆ ಜಲಮಾರ್ಗದಲ್ಲಿ ಸಂಚರಿಸುವ ಈ ನೂತನ ಮಾರ್ಗವನ್ನು ಪ್ರವಾಸಿಗರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.










Discussion about this post