ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಜ್ಞಾನ, ನಾವಾಡುವ ಭಾಷೆ, ನಮ್ಮ ಉದ್ಯೋಗಕ್ಕಿಂತ ಮುಖ್ಯವಾಗಿ ಬೇಕಾದ್ದು ಒಳ್ಳೆಯ ವರ್ತನೆ. ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ಸರಳತೆ ಹಾಗೂ ಗುಣ ನಡತೆಗಳಿಂದಲೇ ವಿಶ್ವ ಶ್ರೇಷ್ಟರಾದದ್ದು ಎಂದು ಇನ್ನಾ ಎಂ.ವಿ.ಶಾಸ್ತ್ರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೆಂದ್ರ ಭಟ್ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದೇಶಿಸಿ ಮಾತನಾಡಿದ ಅವರು, ನಾವು ತೋರಿಸುವ ಪ್ರೀತಿ, ನಮ್ಮಲ್ಲಿರುವ ಜ್ಞಾನ, ನಾವು ಮಾಡುವ ಸಾಧನೆಯಿಂದ ನಮಗೆ ಘನತೆ ಬರುತ್ತದೆ. ಅಂಕಗಳನ್ನು ಗಳಿಸಿದ ಮಾತ್ರಕ್ಕೆ ಶ್ರೇಷ್ಟ ವ್ಯಕ್ತಿತ್ವ ನಿರ್ಮಾಣ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ ಪೀಟರ್ ಫೆರ್ನಾಂಡಿಸ್ ಅವರು ವಿದ್ಯಾರ್ಥಿಗಳಿಗೆ ಶುಭಕೋರಿದರು. ವಿದ್ಯಾರ್ಥಿಗಳಾದ ವೈಷ್ಣವಿ ಪೈ, ಸಾನಿಯಾ, ಐಶ್ವರ್ಯ ಜೈನ್, ಹಾಗೂ ಸ್ತುತಿ ಜೈನ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೇರಿಯನ್ ಡಿ’ಸೋಜ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post