ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ದೇಶ ಸೇವೆ ಮಾಡಲು ಸೈನ್ಯಕ್ಕೇ ಸೇರಬೇಕೆಂದೇನೂ ಇಲ್ಲ. ನಾವು ಎಲ್ಲಿಯೇ ಇದ್ದರೂ ವಿವಿಧ ರೀತಿಗಳಲ್ಲಿ ಈ ದೇಶದ ಸೇವೆ ಮಾಡಬಹುದು ಎಂದು ಭಾರತೀಯ ಭೂಸೇನೆಯ ಮಾಜಿ ಯೋಧ ವಿಜಯಾನಂದ ಅಭಿಪ್ರಾಯಪಟ್ಟರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗಿದ್ದ 77ನೇ ಸ್ಯಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭವ್ಯ ಭಾರತದ ಹೆಮ್ಮೆಯ ಪ್ರಜೆಗಳಾದ ನಾವು ಈ ದೇಶದ ಸೇವೆಗೈಯಲು ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಅನಘ ರಾವ್ ಸ್ವಾತಂತ್ರ್ಯ ದಿನಾಚರಣೆಯ ಕುರಿತು ತನ್ನ ಅನಿಸಿಕೆ ಹಂಚಿಕೊಂಡರು. ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯಶಿಕ್ಷಕ ಡೊಮಿನಿಕ್ ಅಂದ್ರಾದೆ, ಶಾಲಾ ಮುಖ್ಯಶಿಕ್ಷಕ ಮೇರಿಯನ್ ಡಿ’ಸೋಜ, ಶಿಕ್ಷಕ-ರಕ್ಷಕ ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಶಿಕ್ಷಕಿ ಸಿಸ್ಟರ್ ಲವೀನಾ ಸ್ವಾಗತಿಸಿ ಆಂಗ್ಲಭಾಷಾ ಉಪನ್ಯಾಸಕಿ ಅನಿತಾ ಡಿ’ಸೋಜ ವಂದಿಸಿದರು. ವಿಜ್ಞಾನ ಶಿಕ್ಷಕಿ ವಿನಯ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post