ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭರಮಸಾಗರ: ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳ ಸಭೆ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕ ಎಂ. ಚಂದ್ರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ಎ. ಮುರುಳಿ, ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್, ವಿಭಾಗ ಪ್ರಭಾರಿಗಳಾದ ಜಿ.ಎಂ. ಸುರೇಶ್, ಮಂಡಲ ಉಸ್ತುವಾರಿ ಜಿ.ಟಿ. ಸುರೇಶ್, ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ. ಶರಣಪ್ಪ, ಸಾಮಿಲ್ ಶಿವಣ್ಣ, ಎಚ್.ಎಂ. ಮಂಜುನಾಥ್, ಈ ವೇಳೆ ವಿವಿದ ಮೋರ್ಚಾದ ಅಧ್ಯಕ್ಷರು ಹಾಗೂ ಕಾರ್ಯಕಾರಿಣಿ ಸಮಿತಿ ರಚನೆ ಮಾಡಲಾಯಿತು ಹಾಗೂ ನೂತನವಾಗಿ ಬಿಜೆಪಿಗೆ ಸೇರ್ಪಡೆಗೊಂಡವರನ್ನು ಸ್ವಾಗತಿಸಲಾಯಿತು.
ಜಿಲ್ಲಾಯುವ ಮೋರ್ಚಾ ಉಪಕಾರ್ಯದರ್ಶಿಯಾಗಿ ಸಿರಿಗೆರೆ ಮೋಹನ್, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎನ್. ಕಲ್ಲೇಶ್, ಎಪಿಎಂಸಿ ಸದಸ್ಯೆ ಲೋಲಾಕ್ಷಮ್ಮನವರಿಗೆ ಅಭಿನಂದಿಸಲಾಯಿತು.
ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮೋಹನ್ ವಂದಿಸಿ, ಪ್ರಾರ್ಥನೆ ನಿರ್ಮಲಾ, ರಾಜೇಶ್ವರಿ, ನಿರೂಪಣೆ, ಎಸ್. ವೀರೇಶ್, ಪ್ರಾಸ್ತಾವಿಕ ಭಾಷಣ ಮಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ಸುರೇಶ್ ಇದ್ದರು. ಶಾಸಕ ಎಂ. ಚಂದ್ರಪ್ಪ ಮಾತನಾಡಿದರು.
(ವರದಿ: ಎಂ.ಎಂ. ನಾಡಿಗೇರ್, ಭರಮಸಾಗರ)
Get In Touch With Us info@kalpa.news Whatsapp: 9481252093







Discussion about this post